ಹೊಸಪೇಟೆ (ವಿಜಯನಗರ): ಎರಡು ಕಂಟೇನರ್ ಟ್ರಕ್ಗಳಲ್ಲಿ 67 ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಹೊಸಪೇಟೆ–ಬಳ್ಳಾರಿ ಹೆದ್ದಾರಿಯ ಕೊಟಗಿನಾಳ್ ಕ್ರಾಸ್ ಬಳಿ ಶನಿವಾರ ನಸುಕಿನಲ್ಲಿ ಪತ್ತೆಹಚ್ಚಿರುವ ಗ್ರಾಮೀಣ ಠಾಣೆ ಪೊಲೀಸರು, ಆರು ಮಂದಿಯನ್ನು ಬಂಧಿಸಿದ್ದಾರೆ.

ಕೇರಳ ವಯನಾಡ್ ಜಿಲ್ಲೆಯ ತಲಹತ್, ಕೆ.ಪಿ.ದಿನೇಶ್, ಸಲೀಂ, ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ರಮೇಶ್, ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಮಲ್ಲಯ್ಯ ಮತ್ತು ಸ್ವಾಮಿ ಅವರನ್ನು ಬಂಧಿಸಲಾಗಿದೆ, ಖಲೀಂ ಹಾಗೂ ಎರಡು ಟ್ರಕ್ಗಳ ಮಾಲೀಕರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಎಸ್ಪಿ ಎಸ್.ಜಾಹ್ನವಿ ತಿಳಿಸಿದ್ದಾರೆ.

ಆರೋಪಿಗಳು ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೂಪದಲ್ಲಿ 13 ಎಮ್ಮೆ, 48 ಎತ್ತು, 5 ಕೋಣ, 1 ಕರುವನ್ನು ಸಾಗಿಸುತ್ತಿದ್ದಾರೆ ಎಂಬ ಬಗ್ಗೆ ಜಿ.ಸಿ.ಶಿವುಕುಮಾರ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಪಂಚರ ಸಮಕ್ಷಮ ವಾಹನಗಳ ತಪಾಸಣೆ ನಡೆಸಿದಾಗ ಜಾನುವಾರುಗಳ ಅಕ್ರಮ ಸಾಗಣೆ ಪತ್ತೆಯಾಯಿತು. ಇದೀಗ ಎಲ್ಲಾ ಜಾನುವಾರುಗಳನ್ನು ಮತ್ತು ಎರಡು ಟ್ರಕ್ಗಳನ್ನ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.