ಶನಿವಾರ, ಮೇ 28, 2022
27 °C

ಆಲಿಕಲ್ಲು ಮಳೆಗೆ ನೆಲಕ್ಕೊರಗಿದ ರಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ (ವಿಜಯನಗರ ಜಿಲ್ಲೆ): ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸುರಿದ ಬಿರುಗಾಳಿ, ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿರುವುದರಿಂದ ಕೊಯ್ಲು ಹಂತದಲ್ಲಿದ್ದ ರಾಗಿ ನೆಲಕ್ಕೊರಗಿದೆ.

ಉಚ್ಚಂಗಿದುರ್ಗ, ಪುಣಭಘಟ್ಟ, ಚಟ್ನಿಹಳ್ಳಿ, ಹಿರೇಮೆಗಳಗೆರೆ, ಲಕ್ಷ್ಮೀಪುರ, ಕಂಚಿಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಅರಸೀಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಬಿರುಸು ಮಳೆಯಾಗಿದೆ.

ನಾಗತಿಕಟ್ಟೆ ಗ್ರಾಮದಲ್ಲಿ ಬೀಸಿದ ಬಿರುಗಾಳಿಗೆ ನಾಲ್ಕು ಜಾಲಿ ಮರಗಳು, ಅರಸೀಕೆರೆ ರಸ್ತೆಯಲ್ಲಿ ಬೇವಿನ ಮರ ನೆಲಕ್ಕುರುಳಿದೆ. ಕೊಯ್ಲು ಮಾಡಿದ ಮೇವು ಮಳೆಗೆ ಒದ್ದೆಯಾಗಿದೆ. ಇನ್ನಷ್ಟೇ ಹಾನಿಯ ವಿವರ ಗೊತ್ತಾಗಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.