ಹೊರ್ತಿ: ಭಾರತ ದೇಶ ಅಧ್ಯಾತ್ಮ-ಸಂಸ್ಕಾರ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಬೀಡಾಗಿದೆ ಎಂದು ವಿಜಯಪುರ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಪಸೆ ಹೇಳಿದರು.
ಸಮೀಪದ ಝಳಕಿ ಗ್ರಾಮದ ಕಾಡಸಿದ್ದೇಶ್ವರ ಮಠದ ಆವರಣದಲ್ಲಿ ಇತ್ತೀಚೆಗೆ ಕಾಡಸಿದ್ದೇಶ್ವರ ಗಜಾನನ ತರುಣ ಮಂಡಳಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮತ್ತು ಅದರಲ್ಲೂ ಹೆಚ್ಚಾಗಿ ಯುವಕ ಜನತೆ ಗಜಾನನ ಉತ್ಸವವನ್ನು ಭಕ್ತಿ, ಭಾವ, ಸಡಗರ -ಸಂಭ್ರಮದಿಂದ ಆಚರಿಸುತ್ತ ಬರುತ್ತಿರುವುದು ಶ್ಲಾಘನೀಯ' ಎಂದು ಹೇಳಿದರು.
ವೀರಭದ್ರಯ್ಯ ಹಿರೇಮಠ ಗಜಾನನ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಸಣ್ಣಪ್ಪ ತಳವಾರ, ಹಣಮಂತ ಕೋಳಿ, ಶ್ರೀ ಶೈಲಗೌಡ ಬಿರಾದಾರ, ರವಿ ತೇಲಿ, ಶಂಕರಗೌಡ ಬಿರಾದಾರ, ಸುನೀಲ ಹೂಗಾರ, ಮಲಕಾರಿ ಕಾಗರ, ಬಾಲಕೃಷ್ಣ ಭೋಷಲೆ, ರಾಹುಲ ಹಿರೇಮಠ, ಸಂಗಮೇಶ ಸಕ್ರಿ, ಸಾಯಿನಾಥ ಕಾಸರ ಇದ್ದರು.