ಬುಧವಾರ, ಜುಲೈ 6, 2022
22 °C

ವಿಜಯನಗರ | ಅಂತರ್ಜಾತಿ ಮದುವೆ; ರಕ್ಷಣೆ ಕೋರಿದ ದಂಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ(ವಿಜಯನಗರ): ಅಂತರ್ಜಾತಿ ವಿವಾಹವಾಗಿರುವ ದಂಪತಿ ಮನೆಯವರಿಂದ ರಕ್ಷಣೆ ಕೊಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಅವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಪಿ.ಎನ್.ಸೌಮ್ಯ ಹಾಗೂ ಕಿರಣ್ ಅವರು ಗುರುವಾರ ಖುದ್ದು ಎಸ್ಪಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

‘ಪರಸ್ಪರ ಪ್ರೀತಿಸಿ ನ. 30ರಂದು ಸ್ವಇಚ್ಛೆಯಿಂದ ಹರಪನಹಳ್ಳಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದೇವೆ. ಅಂತರ್ಜಾತಿ ವಿವಾಹವಾದ ಕಾರಣ ಮನೆಯವರು ಒಪ್ಪುತ್ತಿಲ್ಲ. ಜೀವ ಬೆದರಿಕೆ ಹಾಕುತ್ತಿದ್ದಾರೆ. ರಕ್ಷಣೆ ಒದಗಿಸಬೇಕು’ ಎಂದು ಪತ್ರದಲ್ಲಿ ಕೋರಿದ್ದಾರೆ. ಕಿರಣ ಕೊರಚ ಜಾತಿಗೆ ಸೇರಿದರೆ, ಸೌಮ್ಯ, ಲಿಂಗಾಯತ ಸಮುದಾಯದವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು