ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡ ಪ್ರತಿಮೆ‌ ಅನಾವರಣಕ್ಕೆ ಹಂಪಿ ಮಣ್ಣು

ನಾಲ್ವರು ಸಚಿವರಿಂದ ಹಂಪಿ ವಿರೂಪಾಕ್ಷ, ಭುವನೇಶ್ವರಿ ದೇವಿಗೆ ಪೂಜೆ
Last Updated 4 ನವೆಂಬರ್ 2022, 5:42 IST
ಅಕ್ಷರ ಗಾತ್ರ

ಹೊಸಪೇಟೆ: ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ ಶುಕ್ರವಾರ ನಾಲ್ವರುಸಚಿವರು ಹಂಪಿಗೆ ಬಂದು ಇಲ್ಲಿನ ಪವಿತ್ರ ಮಣ್ಣು ಕೊಂಡೊಯ್ದರು.

ಹಂಪಿ ವಿರೂಪಾಕ್ಷೇಶ್ವರ, ಭುವನೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಿದ ಸಚಿವರು, ಬಳಿಕ ಮಣ್ಣು ಸಂಗ್ರಹಿಸಿದರು. ನಾಡಪ್ರಭು ಕೆಂಪೇಗೌಡ, ಶ್ರೀ ಕೃಷ್ಣದೇವರಾಯನ ಹೆಸರಲ್ಲಿ ಅರ್ಚನೆ ಮಾಡಿಸಿದರು. ಆರತಿ ತಟ್ಟೆಗೆ ಎಲ್ಲರೂ ತಲಾ ₹500 ಹಾಕಿದರು.

ಹಂಪಿ ಪುಷ್ಕರಣಿಗಳಿಂದ ಒಂಬತ್ತು ಹಿತ್ತಾಳೆಯಬಿಂದಿಗೆಗಳಲ್ಲಿ ಸಂಗ್ರಹಿಸಿದ ಮಣ್ಣಿಗೆ ಪೂಜೆನೆರವೇರಿಸಿದರು.

ಇದಕ್ಕೂ ಮುನ್ನ ಸಚಿವರನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬಿಜೆಪಿ ಮುಖಂಡರು ಸ್ವಾಗತಿಸಿದರು. ಅಲ್ಲಿಂದ ಹಂಪಿ ವರೆಗೆ ಬೈಕ್ ಜಾಥಾ ನಡೆಸಿದರು. ಅಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಸಚಿವರು ವಿರೂಪಾಕ್ಷ ದೇಗುಲದ ವರೆಗೆ‌ ಹೆಜ್ಜೆ ಹಾಕಿದರು.

ಸಚಿವರಾದ ಆರ್. ಅಶೋಕ್, ಆರಗ ಜ್ಞಾನೇಂದ್ರ, ಡಾ.ಸಿ.ಎನ್. ಅಶ್ವತ್ಥನಾರಾಯಣ, ನಾರಾಯಣಗೌಡ, ಸಂಸದ ವೈ.ದೇವೇಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT