ಹೊಸಪೇಟೆ (ವಿಜಯನಗರ): ಅಲ್ ಇಂಡಿಯಾ ರೋಡ್ ಟ್ರಾನ್ಸ್ಪೋರ್ಟ್ ವರ್ಕರ್ಸ್ ಫೆಡರೇಶನ್ನ ನೇತೃತ್ವದಲ್ಲಿ ಟ್ಯಾಕ್ಸಿ ಚಾಲಕರು, ಟಾಟಾ ಏಸ್, ಆಂಬುಲೆನ್ಸ್, ಆಟೋ ಚಾಲಕರು ಹಾಗೂ ಮೆಕಾನಿಕ್ಗಳ ಸಮಾವೇಶ ಮಂಗಳವಾರ ಇಲ್ಲಿ ನಡೆದಿದ್ದು, ಕಾರ್ಮಿಕ ಕಾನೂನು ತಿದ್ದುಪಡಿಯ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಲಾಯಿತು.

ರಾಜ್ಯ ಉಪಾಧ್ಯಕ್ಷ ಆರ್.ಎಸ್.ಬಸವರಾಜ್ ಮಾತನಾಡಿ, ‘ಕಾರ್ಮಿಕ ಕಾನೂನುಗಳ ತಿದ್ದುಪಡಿ ಆಗುವುದರಿಂದ ಚಾಲಕರಿಗೆ ಬಹಳ ಕಷ್ಟದ ದಿನಗಳು ಎದುರಾಗಲಿವೆ. ಇದರ ಬಗ್ಗೆ ತಿಳಿವಳಿಕೆ ಅಗತ್ಯ’ ಎಂದರು.

ಸಮಾವೇಶ ಉದ್ಘಾಟಿಸಿದ ರಾಜ್ಯ ಕಾರ್ಯದರ್ಶಿ ಬಿ.ವಿ.ರಾಘವೇಂದ್ರ ಮಾತನಾಡಿದರು. ಎ.ಕರುಣಾನಿಧಿ ಅವರು ಚಾಲಕರಿಗೆ ಸಂಚಾರದ ನಿಯಮಗಳು ಹಾಗೂ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.

ಪುನೀತ್ ರಾಜ್ಕುಮಾರ್ ಆಟದ ಮೈದಾನದಿಂದ ಭಟ್ರಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಸಮುದಾಯಭವನದವರೆಗೆ ವಾಹನಗಳ ಜಾಥಾ ನಡೆಯಿತು. ಟ್ಯಾಕ್ಸಿ ಚಾಲಕ ಮಹಾಂತೇಶ್ ಧ್ವಜಾರೋಹಣ ನೆರವೇರಿಸಿದರು. ಸಸ್ಯಗಳನ್ನು ನೆಡಲಾಯಿತು.

ಚನ್ನಬಸವೇಗೌಡ ಆಧ್ಯಕ್ಷತೆ ವಹಿಸಿದ್ದರು. ಎಫ್ಕೆಎಆರ್ಡಿಯು ರಾಜ್ಯ ಪ್ರಧಾನಕಾರ್ಯದರ್ಶಿ ಕೆ.ಎಂ.ಸಂತೋಷ್ ಕುಮಾರ್, ಹೊಸಪೇಟೆ ತಾಲ್ಲೂಕು ಸಮಿತಿಯ ಖಜಾಂಚಿ ಅನಂತಶಯನ, ಕಾರ್ಯದರ್ಶಿ ಯಮುನಪ್ಪ ಇದ್ದರು.

ಸಂಚಾಲನಾ ಸಮಿತಿ ರಚನೆ: ಸಂಚಾಲಕರಾಗಿ ಕೆ.ಎಂ.ಸಂತೋಷ್ ಕುಮಾರ್, ಸಹ ಸಂಚಾಲಕರಾಗಿ ಚನ್ನಬಸವಣ್ಣ ಗೌಡ ಬಳ್ಳಾರಿ ಜಿಲ್ಲೆ, ವೆಂಕಟೇಶ ಕುಲಕರ್ಣಿ ವಿಜಯನಗರ ಜಿಲ್ಲೆ, ಹನುಮಂತಪ್ಪ, ಕೊಪ್ಪಳ ಜಿಲ್ಲೆ, ವಿರೇಶ್, ಗದಗ ಜಿಲ್ಲೆ, ಜೆ.ಕೆ.ಹರೀಶ್, ಹಾಸನ ಜಿಲ್ಲೆ, ಅರುಣ ಕುಮಾರ್, ಚಿಕ್ಕಮಗಳೂರು ಜಿಲ್ಲೆ, ಗುರುಮೂರ್ತಿ, ಬಳ್ಳಾರಿ ಜಿಲ್ಲೆ, ರಾಹುಲ್ ಗಾಯಕವಾಡ್, ಬಾಗಲಕೋಟೆ ಜಿಲ್ಲೆ, ಅಸ್ಲಂ, ಧಾರವಾಡ ಜಿಲ್ಲೆ, ಚೇತನ್, ರಾಯಚೂರು ಜಿಲ್ಲೆ, ಪ್ರಸಾದ್, ಬೆಂಗಳೂರು ಜಿಲ್ಲೆ ಆಯ್ಕೆಯಾದರು. ಇದರ ಜವಾಬ್ದಾರಿಯನ್ನು ಸಿಐಟಿಯು ನ ರಾಜ್ಯ ಕಾರ್ಯದರ್ಶಿ ಬಿ.ವಿ.ರಾಘವೇಂದ್ರ ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.