ಹೊಸಪೇಟೆ (ವಿಜಯನಗರ): ‘ವಿಜಯ ಕಲ್ಯಾಣ’ ಎಂದೇ ಗುರುತಿಸಿಕೊಂಡಿರುವ ಹಂಪಿಯಲ್ಲಿ ಲಿಂಗಾಯತ ಧರ್ಮ, ವಚನ ಸಾಹಿತ್ಯ ಮತ್ತೆ ಪ್ರವರ್ಧಮಾನಕ್ಕೆ ಬಂತು, ಇಲ್ಲಿನ ಸ್ಫೂರ್ತಿಯನ್ನು ಪಡೆದುಕೊಂಡು ಪ್ರತ್ಯೇಕ ಧರ್ಮವನ್ನು ಸಾಂವಿಧಾನಿಕವಾಗಿ ಪಡೆಯುವ ಹೋರಾಟ ಮುಂದುವರಿಯಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ ಹೇಳಿದರು.

ಅವರು ಭಾನುವಾರ ಇಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ನಡೆದ ಜಿಲ್ಲಾ ಲಿಂಗಾಯತರ ಸಮಾವೇಶ, ಜಿಲ್ಲಾ ಘಟಕದ ಉದ್ಘಾಟನೆ ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ವಚನ ಸಾಹಿತ್ಯ ಪುನಃ ಪ್ರವರ್ಧಮಾನಕ್ಕೆ ಬರಲು ಕಾರಣೀಕರ್ತನಾದ ಭೀಮ ಕವಿ ತನ್ನ ಬಸವಪುರಾಣ ಬರೆದುದು ಇದೇ ನೆಲದಲ್ಲಿ .ಹರಿಹರನ ರಗಳೆ, ರಾಘವಾಂಕ, ಚಾಮರಸ ಸಹಿತ ಹಲವಾರು ಕವಿಗಳ ಇಲ್ಲಿ ವಚನ ಸಾಹಿತ್ಯವನಬ್ನು ಮತ್ತೆ ಬೆಳಗುವ ಕೆಲಸ ಮಾಡಿದರು. ಇದು ನಮಗೆಲ್ಲರಿಗೂ ಪ್ರೇರಣೆಯಾಗಬೇಕು ಎಂದರು.

‘ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದುದು 1,336ರಲ್ಲಿ. ಅದಕ್ಕಿಂತ ಸುಮಾರು 150 ವರ್ಷಗಳ ಮೊದಲೇ ಅಂದರೆ 1,176ರಲ್ಲಿ ಇಲ್ಲಿ ಲಿಂಗಾಯತ ಚೆರಿತ್ರೆ ಆರಂಭವಾಗಿತ್ತು. ತುಂಗಭದ್ರಾ ನದಿದಂಡೆಯಲ್ಲಿ ನೂರಾರು ವಿರಕ್ತರು, ಶೂನ್ಯ ಸಿಂಹಾಸನಾಧೀಶ್ವರರು ನೆಲೆಸಿದ್ದರು. ಹೀಗಾಗಿ ಈ ನೆಲ ಲಿಂಗಾಯತರಿಗೆ ಅತ್ಯಂತ ಪವಿತ್ರ ತಾಣವೇ ಆಗಿದೆ ಎಂದರು.

ಇತರ ಧರ್ಮದವರನ್ನು ಕೀಳಾಗಿ ಕಾಣುವುದು, ಹೀಯಾಳಿಸುವುದು ಅಥವಾ ಅವರ ವಿರುದ್ಧ ಯಾವುದೇ ರೀತಿಯಲ್ಲಿ ಭಾವನೆಗೆ ಧಕ್ಕೆ ಆಗುವಂತೆ ನಡೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಬಾಚಿಗೊಂಡನಹಳ್ಳಿ ತೋಂಟದಾರ್ಯ ಶಾಖಾ ಮಠದ ಶಿವಮಹಾಂತಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆಂಪಗೌಡ, ನಿವೃತ್ತ ಐಎಎಸ್ ಅಧಿಕಾರಿ ಎಂ.ವಿ.ಗೊಂಗಡಶೆಟ್ಟರು, ಶರಣ ಸಾಹಿತ್ಯ ಸಂಶೋಧಕ ಟಿ.ಆರ್.ಚಂದ್ರಶೇಖರ್, ಕೆ.ರವೀಂದ್ರನಾಥ ಇತರರು ಇದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಘಟಕವನ್ನು ಆಯ್ಕೆ ಮಾಡಲಾಯಿತು. ಎಸ್.ಬಸವರಾಜ್ ಮಾವಿನಹಳ್ಳಿ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಎಲ್ಲಾ ಜಿಲ್ಲಾ ಪದಾಧಿಕಾರಿಗಳಿಗೆ ಕಾಯಕ ದೀಕ್ಷೆಯ ಪ್ರಮಾಣವಚನ ಬೋಧಿಸಲಾಯಿತು.

ಭಾರಿ ಸಂಖ್ಯೆಯಲ್ಲಿ ಸೇರಿದ್ದ ಸಮುದಾಯದ ಮಂದಿ ಇಡೀ ದಿನ ಸಭೆ, ಕಾರ್ಯಕಾರಿಣಿ, ಪ್ರಶ್ನೋತ್ತರ ವೀರಶೈವ ಲಿಂಗಾಯತ ಕೂಡಿದ ಪದವೇ ಇಲ್ಲ

ವೀರಶೈವ ಲಿಂಗಾಯತ ಒಂದೇ ಎಂದು ಸಾಬೀತುಪಡಿಸುವುದಕ್ಕೆ ನಮ್ಮಲ್ಲಿ ಯಾವುದೇ ದಾಖಲೆ ಇಲ್ಲ ಎಂದು ಸರ್ಕಾರ ಲಿಖಿತವಾಗಿ ನೀಡಿರುವ ದಾಖಲೆ ನಮ್ಮ ಬಳಿ ಇದೆ
ಶಿವಾನಂದ ಜಾಮದಾರ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿನಂದ ಜಾಮದಾರ

ಹೊರಗಿನಿಂದ ಬಾಡಿಗೆ ತರಬೇಡಿ:  ‘ಲಿಂಗಾಯತ ಧರ್ಮದ ಕುರಿತಂತೆ ಸಮರ್ಥವಾಗಿ ಮಾತನಾಡುವವರು ನಮ್ಮಲ್ಲೇ ಇದ್ದಾರೆ ಹೊರಗಿನಿಂದ ಬಾಡಿಗೆ ತರಬೇಡಿ ಅವರಿಂದ ಸಂಘಟನೆಗೆ ಧಕ್ಕೆ ಆಗುತ್ತಿದೆ ಅವರು ವಿಷಯಾಂತರ ಮಾಡುತ್ತಿದ್ದಾರೆ. ಇಂತಹ ತಪ್ಪುಗಳು ಇನ್ನು ಮುಂದೆ ಆಗಬಾರದು’ ಎಂದು ಜಾಮದಾರ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.