ಕಾನಹೊಸಹಳ್ಳಿ(ವಿಜಯನಗರ ಜಿಲ್ಲೆ): ಮಾನಸಿಕ ಅಸ್ವಸ್ಥೆಯನ್ನು ಬೆತ್ತಲೆಗೊಳಿಸಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಘಟನೆ ಕಾನಹೊಸಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯ ಗಡಿ ಗ್ರಾಮ ತಿಪ್ಪೇಹಳ್ಳಿ ಹೊರವಲಯದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಅಬ್ಬೇನಹಳ್ಳಿಯ ನೇತ್ರಾ (30) ಹತ್ಯೆಯಾದವರು. ತಿಪ್ಪೇಹಳ್ಳಿ- ಅಬ್ಬೇನಹಳ್ಳಿಯ ಮಧ್ಯದ ನಿರ್ಜನ ಪ್ರದೇಶದಲ್ಲಿ ಹತ್ಯೆ ಮಾಡಲಾಗಿದೆ, ಶ್ವಾನದಳ, ಬೆರಳಚ್ಚು ಸಿಬ್ಬಂದಿ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಸ್ಥಳದಲ್ಲಿ ಕೊಟ್ಟೂರು ಸಿಪಿಐ ವೆಂಕಟಸ್ವಾಮಿ, ಕಾನಹೊಸಹಳ್ಳಿ ಪಿಎಸ್ಐ ಸಿದ್ದರಾಮಪ್ಪ ಬಿದರಾಣಿ ಪರಿಶೀಲನೆ ನಡೆಸುತ್ತಿದ್ದಾರೆ.