ಗುರುವಾರ , ಮಾರ್ಚ್ 23, 2023
23 °C
ಸಚಿವ ಆನಂದ್‌ ಸಿಂಗ್‌ರಿಂದ ದೀಪಾವಳಿ ಕೊಡುಗೆ

ನಗರಸಭೆ ಸದಸ್ಯರಿಗೆ ಲಕ್ಷ ನಗದು: ಸಚಿವ ಆನಂದ್‌ ಸಿಂಗ್‌ರಿಂದ ದೀಪಾವಳಿ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಹೊಸಪೇಟೆ ನಗರಸಭೆ ಸದಸ್ಯರು, ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ದೀಪಾವಳಿಯ ಬಂಪರ್‌ ಕೊಡುಗೆ ನೀಡಿದ್ದಾರೆ.

ನಗರಸಭೆ ಸದಸ್ಯರಿಗೆ ₹1 ಲಕ್ಷ ನಗದು, 1 ಕೆ.ಜಿ ಬೆಳ್ಳಿ, ರೇಷ್ಮೆ ಸೀರೆ, ಪಂಚೆ, ಅಂಗಿ, ಮುತ್ತಿನ ಹಾರ ಹಾಗೂ ಡ್ರೈ ಫ್ರೂಟ್ಸ್ ಡಬ್ಬಿ ಒಳಗೊಂಡ ಕಿಟ್‌ ಕೊಟ್ಟಿದ್ದಾರೆ. ಪಂಚಾಯಿತಿಯ ಒಬ್ಬ ಸದಸ್ಯರಿಗೆ ತಲಾ ₹27 ಸಾವಿರ ನಗದು, 500 ಗ್ರಾಂ ಬೆಳ್ಳಿ, ಅದರೊಂದಿಗೆ ದೀಪಾವಳಿ ಹಬ್ಬದ ಶ್ರೀ ಲಕ್ಷ್ಮಿ ಪೂಜಾ ಆಮಂತ್ರಣ ಪತ್ರಿಕೆ ಎಂದು ಬರೆದ ಆಹ್ವಾನ ಪತ್ರಿಕೆಯೂ ನೀಡಿದ್ದಾರೆ.

ಸಚಿವರ ಬೆಂಬಲಿಗರು ಎಲ್ಲ ಸದಸ್ಯರಿಗೆ ಕೊಡುಗೆ ತಲುಪಿಸುತ್ತಿದ್ದಾರೆ ಎಂದು ಗೊತ್ತಾಗಿದೆ. ಹೆಸರು ಹೇಳಲಿ
ಚ್ಛಿಸದ ಕೆಲ ನಗರಸಭೆ, ಪಂಚಾಯಿತಿ ಸದಸ್ಯರು ಈ ವಿಷಯವನ್ನು ಶನಿವಾರ ‘ಪ್ರಜಾವಾಣಿ’ಗೆ ದೃಢಪಡಿಸಿದರು. ಈ ಕುರಿತು ಸಚಿವ ಆನಂದ್‌ ಸಿಂಗ್‌ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ಹೊಸಪೇಟೆ ನಗರಸಭೆಯಲ್ಲಿ 35 ಸದಸ್ಯರು, 5 ಜನ ನಾಮನಿರ್ದೇಶಿತ ಸದಸ್ಯರಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 14 ಗ್ರಾಮ ಪಂಚಾಯಿತಿಗಳಿದ್ದು 282 ಸದಸ್ಯರಿದ್ದಾರೆ. ವಿಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿ 10 ಗ್ರಾಮ ಪಂಚಾಯಿತಿಯ 182 ಸದಸ್ಯರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು