ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮನಾಯ್ಕರಿಂದ ಶಿಕ್ಷಕರಿಗೆ ಬೆಳ್ಳಿ ನಾಣ್ಯ

ಶಿಕ್ಷಕರ ದಿನಾಚರಣೆ ಕಾರ್ಯಕ್ರಮ: ಕಾಣಿಕೆ ರೂಪದಲ್ಲಿ ಏಳು ಗ್ರಾಂ ತೂಕದ ನಾಣ್ಯ ವಿತರಣೆ
Last Updated 5 ಸೆಪ್ಟೆಂಬರ್ 2022, 22:39 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಕಾಂಗ್ರೆಸ್‌ ಶಾಸಕ ಎಲ್‌.ಬಿ.ಪಿ. ಭೀಮನಾಯ್ಕ ಅವರು ಶಿಕ್ಷಕರ ದಿನಾ ಚರಣೆಯಂದು ಹಗರಿಬೊಮ್ಮನ ಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿಕ್ಷಕರಿಗೆ ಬೆಳ್ಳಿ ನಾಣ್ಯ ಕಾಣಿಕೆಯಾಗಿ ನೀಡಿದ್ದಾರೆ.

ತಾಲ್ಲೂಕು ಆಡಳಿತವು ಸೋಮವಾರ ಶಿಕ್ಷಕರ ದಿನಾಚರಣೆ ಏರ್ಪಡಿಸಿತ್ತು. ಕಾರ್ಯಕ್ರಮದಲ್ಲೇ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿಬ್ಬಂದಿ, ನಿವೃತ್ತ ಶಿಕ್ಷಕರಿಗೆ ಶಾಸಕರು ಏಳು ಗ್ರಾಂ ತೂಕದ ನಾಣ್ಯ ವಿತರಿಸಿದ್ದಾರೆ. ನಾಣ್ಯದ ಒಂದು ಬದಿಯಲ್ಲಿ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್‌ ಚಿತ್ರವಿದೆ. ಇನ್ನೊಂದು ಬದಿಯಲ್ಲಿ ಶಾಸಕರ ಹೆಸರಿದೆ.

‘ಶಿಕ್ಷಕರಿಗೆ ಗೌರವ ಸಲ್ಲಿಸಲು ಕ್ಷೇತ್ರದ ಎಲ್ಲ ಶಿಕ್ಷಕರಿಗೆ ಬೆಳ್ಳಿ ನಾಣ್ಯ ನೀಡಲಾಗಿದೆ. ಇದರಲ್ಲಿ ಬೇರೆ ಉದ್ದೇಶ ಇಲ್ಲ’ ಎಂದು ಭೀಮ ನಾಯ್ಕ ಪ್ರತಿಕ್ರಿಯಿಸಿದ್ದಾರೆ.

‘ದೇಣಿಗೆ, ಕಾಣಿಕೆ ಕೊಡುವುದು ಇದ್ದರೆ ಅನುಮತಿ ಪಡೆಯಬೇಕು. ರಾಜ್ಯ ಸರ್ಕಾರಿ ನೌಕರರು ₹5 ಸಾವಿರಕ್ಕಿಂತ ಮೇಲಿನ ಕಾಣಿಕೆ ಪಡೆಯಲು ಅನುಮತಿ ಪಡೆಯಬೇಕಾಗುತ್ತದೆ’ ಎಂದು ಜಿಲ್ಲಾಧಿ
ಕಾರಿ ಅನಿರುದ್ಧ್‌ ಶ್ರವಣ್‌ ಪಿ. ತಿಳಿಸಿದರು.

‘ನಾಣ್ಯ ವಿತರಿಸಿರುವುದು ನನಗೆ ಗೊತ್ತಿಲ್ಲ. ಅನುಮತಿ ಪಡೆದಿಲ್ಲ’ ಎಂದು ಡಿಡಿಪಿಐ ಜೆ.ಕೊಟ್ರೇಶ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT