ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಪವರ್‌ಲಿಫ್ಟಿಂಗ್: ವಿಜಯವಾಣಿಗೆ ಚಿನ್ನ

Published 29 ನವೆಂಬರ್ 2023, 13:06 IST
Last Updated 29 ನವೆಂಬರ್ 2023, 13:06 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಬೆಂಗಳೂರಿನಲ್ಲಿ ನ.22ರಿಂದ 26ರವರೆಗೆ ನಡೆದ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ನಗರದ ವಿಜಯವಾಣಿ ಅವರು 76 ಕೆ.ಜಿ. ಎಂ1 ಮಹಿಳೆಯರ ವಿಭಾಗದಲ್ಲಿ 92.5 ಕೆ.ಜಿ. ಭಾರ ಎತ್ತುವುದರ ಮೂಲಕ ದಾಖಲೆಯೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ.

ಇಲ್ಲಿನ ವಿಕ್ಟರಿ ಜಮೀನ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ವಿಜಯವಾಣಿ ಅವರುಮ ತಮ್ಮ ಸಾಧನೆಯ ಮೂಲಕ ದೇಶದ ಮೂರನೇ ಶ್ರೇಷ್ಠ ಲಿ‍ಪ್ಟರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಮುಂದಿನ ದಿನಗಳಲ್ಲಿ ಇವರಿಗೆ ಸರ್ಕಾರದಿಂದ ಸೌಲಭ್ಯ ದೊರಕಿದರೆ ಅಂತರರಾಷ್ಟ್ರೀಯ ಪವರ್‌ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಭಾರತ್ಕೆ ಚಿನ್ನದ ಪದಕ ತಂದುಕೊಡುವುದು ನಿಶ್ಚಿತ ಎಂದು ತರಬೇತುದಾರ ವಲಿಬಾಷ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT