ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗದ ಕುರಿತು ತರಬೇತಿ ಅಗತ್ಯ : ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಪೂರ್ವಗ್ರಹ ಪೀಡಿತರಿಂದ ನ್ಯಾಯ ಸಾಧ್ಯವಿಲ್ಲ 
Last Updated 4 ಫೆಬ್ರುವರಿ 2022, 9:32 IST
ಅಕ್ಷರ ಗಾತ್ರ

ಅರಸೀಕೆರೆ (ವಿಜಯನಗರ ಜಿಲ್ಲೆ): ಇತ್ತೀಚಿನ ದಿನಗಳಲ್ಲಿನ್ಯಾಯ ನೀಡುವ ಸ್ಥಾನದಲ್ಲಿರುವ ಕೆಲವರು ಪೂರ್ವಗ್ರಹ ಪೀಡಿತರಿದ್ದು, ಅಂತಹ ಮನಸ್ಸುಗಳಿಂದಾಗಿ ಸಮ್ಮತವಾದ ನ್ಯಾಯ ಸಾರ್ವಜನಿಕರಿಗೆ ದೊರಕುತ್ತಿಲ್ಲ ಎಂದು ಚಿತ್ರದುರ್ಗ ಭೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಹೋಬಳಿಯ ಉಚ್ಚಂಗಿದುರ್ಗ ಗ್ರಾಮಕ್ಕೆ ಶುಕ್ರವಾರ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಂದಿನ ದಿನಗಳಲ್ಲಿ ಪೂರ್ವಗ್ರಹ ಪೀಡಿತರಿಂದ ಜನಕ್ಕೆ ನ್ಯಾಯ ಸಿಗದೆ, ಬಹುದೊಡ್ಡ ಅನ್ಯಾಯ ಎದುರಾಗಲಿದೆ. ಹಾಗಾಗಿ ಭಾರತದ ಸಂವಿಧಾನದ ನ್ಯಾಯಾಂಗ ವ್ಯವಸ್ಥೆ ಅಡಿಯಲ್ಲಿ ಅಧ್ಯಯನ ಶಿಬಿರಗಳನ್ನು ಏರ್ಪಡಿಸಿ ಪೂರ್ವಗ್ರಹ ಪೀಡಿತ ಮನಸ್ಸುಗಳನ್ನು ಶುದ್ಧೀಕರಿಸುವಂತಹ ಕೆಲಸಗಳು ನೆಡೆಯಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರಮನಸ್ಸುಗಳು ವಿಶಾಲವಾಗಿ, ಸರ್ವರನ್ನು ಅಪ್ಪಿಕೊಳ್ಳುವ ವ್ಯವಸ್ಥೆ ಜಾರಿಯಾದರೆ ಸಮ ಸಮಾಜದ ನಿರ್ಮಾಣ ಸಾಧ್ಯವಾಗಲಿದೆ ಎಂದರು.

ಮುಖಂಡರಾದ ನಾಗಪ್ಪ, ಟಿ. ಮಂಜಪ್ಪ, ರಾಮಜ್ಜ, ಸಿದ್ದಪ್ಪ, ಎಂ.ಸಿ ಸಿದ್ದೇಶ್ವರ ಗೌಡ, ಆರ್. ಹಾಲೇಶ್, ಲಿಂಗಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT