‘ಹಂಪಿ ವಿಶ್ವಪಾರಂಪರಿಕ ತಾಣ ಇಲ್ಲಿನ ಅವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ನಾನು ಮೇಲಿಂದ ಮೇಲೆ ಹಂಪಿಗೆ ಬರುತ್ತೇನೆ ಈ ಬಾರಿಯ ಭೇಟಿಯಲ್ಲಿ ನನಗೆ ಬಹಳ ಕೆಟ್ಟ ಅನುಭವವಾಗಿದೆ ಮುಂದೆ ಇಂತಹ ಸ್ಥಿತಿ ಇರಬಾರದು’ ಎಂದು ಸಚಿವೆ ನಿರ್ಮಲಾ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಚಿವರು ದೆಹಲಿಗೆ ತೆರಳುವ ಮೊದಲು ಜಿಂದಾಲ್ ವಿಮಾನನಿಲ್ದಾಣದಲ್ಲಿ ಶಾಸಕ ಎಚ್.ಆರ್.ಗವಿಯಪ್ಪ ಅವರ ಜತೆಗೆ 40 ನಿಮಿಷ ಮಾತನಾಡಿದ್ದರು.