ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲಬಾಳು | ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯ

Published 6 ಜನವರಿ 2024, 4:58 IST
Last Updated 6 ಜನವರಿ 2024, 4:58 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕಳೆದ ತಿಂಗಳಿಂದ ಬಯಲೇ ಶೌಚಾಲಯವಾಗಿದೆ.

1ರಿಂದ 8ನೇ ತರಗತಿಯ ವರೆಗೆ 178 ಬಾಲಕರು, 159 ಬಾಲಕಿಯರು ಸೇರಿದಂತೆ ಒಟ್ಟು 337 ವಿದ್ಯಾರ್ಥಿಗಳಿದ್ದಾರೆ. ಬಾಲಕರು ಮೂತ್ರ ವಿಸರ್ಜನೆಗೆ ಗ್ರಾಮದ ಹೊರಗೆ ಬಯಲು ಶೌಚಾಲಯಕ್ಕೆ ತೆರಳಬೇಕು. ವಿದ್ಯಾರ್ಥಿಗಳು ರಸ್ತೆ ದಾಟಿ ಹೋಗಬೇಕಾಗಿರುವುದರಿಂದ ವಾಹನಗಳ ಓಡಾಟಕ್ಕೆ ಪಾಲಕರು ತೀವ್ರ ಆತಂಕ ವ್ಯಕ್ತಪಡಿಸುತ್ತಾರೆ. ಬಾಲಕಿಯರು ಕುಸಿಯುವ ಹಂತದಲ್ಲಿರುವ ಒಂದೇ ಒಂದು ಶೌಚಾಲಯವನ್ನು ಅವಲಂಬಿಸಿದ್ದಾರೆ.

ಶಾಲೆಯಲ್ಲಿರುವ 9 ಜನ ಶಿಕ್ಷಕರಿಗೆ ಪ್ರತ್ಯೇಕ ಶೌಚಾಲಯ ಇಲ್ಲ. ಅವರಿಗೂ ಇದು ಅನಿವಾರ್ಯವಾಗಿದೆ. ವಿರಾಮದ ಅವಧಿಯಲ್ಲಿ ಎಲ್ಲ ಬಾಲಕಿಯರು ಶೌಚಕ್ಕೆ ತೆರಳುವುದಕ್ಕೆ ಸಾಧ್ಯವಾಗದಾಗಿದೆ. ಶೌಚಾಲಯ ಕೆಡವಿದ್ದರೂ ಶಾಲೆಯ ಆವರಣದಲ್ಲಿ ತಾತ್ಕಾಲಿಕ ಶೌಚಾಲಯದ ಶೆಡ್ ನಿರ್ಮಿಸಿದ್ದರೆ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು.

‘ಗ್ರಾಮ ಪಂಚಾಯ್ತಿಯಿಂದ ನರೇಗಾ ಯೋಜನೆ ಅಡಿಯಲ್ಲಿ ಇದ್ದ ಶೌಚಾಲಯಗಳನ್ನು ಕೆಡವಿ ಹೈಟೆಕ್ ಶೌಚಾಲಯ ನಿರ್ಮಿಸಲು ಮುಂದಾಗಿರುವುದು ವಿದ್ಯಾರ್ಥಿಗಳ ಸಮಸ್ಯೆಗೆ ಕಾರಣವಾಗಿದೆ. ಶೌಚಾಲಯ ನಿರ್ಮಾಣಕ್ಕೆ ಇನ್ನೂ ಅಂದಾಜು ಪಟ್ಟಿ ತಯಾರಿಸಿಲ್ಲ.  ₹5 ಲಕ್ಷ ಅನುದಾನದಲ್ಲಿ ಉತ್ತಮ ಶೌಚಾಲಯ ನಿರ್ಮಿಸಲಾಗುತ್ತಿದೆ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ’ ಎಂದು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕೆ. ಹನುಮಂತಪ್ಪ ಹೇಳುತ್ತಾರೆ. 

ಕ್ರೀಡಾ ಚಟುವಟಿಕೆಗಳು ಮರೀಚಿಕೆ

ನಿವೇಶನ ಕೊರತೆಯಿಂದಾಗಿ ಕ್ರೀಡಾಂಗಣ ಇಲ್ಲದೆ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾಚಟುವಟಿಕೆಗಳು ಮರೀಚಿಕೆ ಆಗಿವೆ, ಕಟ್ಟಡಗಳು, ಸುತ್ತುಗೋಡೆ ಸೇರಿದಂತೆ ಶಾಲೆಯ ಒಟ್ಟು ವಿಸ್ತೀರ್ಣ 2,166 ಚದರ ಮೀಟರ್ ಇದೆ. ವಾಲಿಬಾಲ್ ಅಂಕಣದಲ್ಲಿಯೇ ಕಬಡ್ಡಿ ಅಂಕಣ ನಿರ್ಮಿಸಲಷ್ಟೆ ಮಾತ್ರ ಸಾಧ್ಯವಾಗಿದೆ. ಉಳಿದಂತೆ ಎಲ್ಲ ಕ್ರೀಡೆಗಳಿಂದಲೂ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಪ್ರತೀ ಶನಿವಾರ ವಿದ್ಯಾರ್ಥಿಗಳಗೆ ಸಾಮೂಹಿಕ ವ್ಯಾಯಾಮ ಮಾಡಿಸುವುದಕ್ಕೆ ಅಗತ್ಯ ನಿವೇಶನವೂ ಇಲ್ಲ.

ಶಾಲೆಯ ಕಮಾನು ನಿರ್ಮಿಸುವ ಮೊದಲು ಶೌಚಾಲಯಕ್ಕೆ ಆದ್ಯತೆ ನೀಡುವಂತೆ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ವಿನಂತಿಸಿಕೊಳ್ಳಲಾಗಿತ್ತು.
ಕೆ. ಹನುಮಂತಪ್ಪ, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ
ಶೌಚಾಲಯ ಕೆಡುವುದಕ್ಕೆ ಸ್ಥಳೀಯವಾಗಿ ಉಂಟಾದ ಸಮಸ್ಯೆ ಬಗೆಹರಿದಿದೆ. ತಾಂತ್ರಿಕ ಸಮಸ್ಯೆ ಇಲ್ಲ. ಕಾಮಗಾರಿಯ ಎನ್‍ಎಂಆರ್ ತೆಗೆದು ವಾರದಲ್ಲಿ ಕಾಮಗಾರಿ ಆರಂಭಿಸಲಾಗುವುದು.
ಸುಜಾತಾ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡಲಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಯಲು ಶೌಚಾಲಯ ಅವಲಂಬಿಸಿರುವುದು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡಲಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಯಲು ಶೌಚಾಲಯ ಅವಲಂಬಿಸಿರುವುದು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡಲಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯವನ್ನು ಕೆಡವಿರುವುದು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡಲಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯವನ್ನು ಕೆಡವಿರುವುದು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡಲಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಮುಂದೆಯೇ ವಿದ್ಯಾರ್ಥಿಗಳು ವಾಲಿಬಾಲ್ ಆಟ ಆಡುತ್ತಿರುವುದು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡಲಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಮುಂದೆಯೇ ವಿದ್ಯಾರ್ಥಿಗಳು ವಾಲಿಬಾಲ್ ಆಟ ಆಡುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT