ಪ್ರಜಾವಾಣಿ ವಾರ್ತೆ

ಹೊಸಪೇಟೆ: ಮಹಾಶಿವರಾತ್ರಿಯಂದು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಾಂಸ ಮಾರಾಟವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಪತಂಜಲಿ ಯೋಗ ಸಮಿತಿ, ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಸಹಿತ ವಿವಿಧ ಸಂಘಟನೆಗಳು ಸೋಮವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದವು.

ಫೆ.15ರಂದು ಮಹಾಶಿವರಾತ್ರಿ ಎಲ್ಲ ಜಾತಿಯವರಿಗೆ ಪವಿತ್ರ ಹಬ್ಬವಾಗಿದೆ, ದಕ್ಷಿಣ ಕಾಶಿ ಎಂದೇ ಖ್ಯಾತವಾಗಿರುವ ಹಂಪಿಯ ವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆ ಸೇರಿದಂತೆ ಉಪವಾಸ ಜಾಗರಣೆ ನಡೆಯುತ್ತದೆ. ಎಲ್ಲ ಶಿವಾಲಯಗಳಲ್ಲಿಯೂ ಧಾರ್ಮಿಕ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ಜರುಗುತ್ತದೆ. ಹೀಗಾಗಿ ಅಂದು ಮಾಂಸ ಮಾರಾಟಕ್ಕೆ ತಡೆ ಒಡ್ಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಹಂಪಿ ಉತ್ಸವವನ್ನು ಸಹ ಅದೇ ದಿನ ಇಟ್ಟುಕೊಂಡಿದ್ದಕ್ಕೆ ಸಹ ಆಕ್ಷೇಪ ವ್ಯಕ್ತಪಡಿಸಿದ ಸಂಘಟನೆಗಳ ಪ್ರಮುಖರು, ಇನ್ನು ಮುಂದೆ ಇಂತಹ ಪ್ರಮಾದ ಆಗಬಾರದು, ಸ್ಥಳೀಯ ಜನರನ್ನು ಸಂಪರ್ಕಿಸಿಯೇ ಉತ್ಸವಗಳ ದಿನಾಂಕ ನಿರ್ಧರಿಸಬೇಕು ಗುಜ್ಜಲ್ ಗಣೇಶ್, ಪಿ.ವೆಂಕಟೇಶ್ ಇತರರು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ, ಗುಂಡಿ ರಮೇಶ್ ಕಲಾವೇದಿಕೆ, ಜೆಡಿಎಸ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಹೊಸಪೇಟೆ ವೀರಶೈವ ಲಿಂಗಾಯತ ಸಮಾಜ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ವಿಜಯನಗರ ಸಾಹಿತ್ಯ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ನಾಗರಿಕ ಹಿತ ರಕ್ಷಣಾ ಸೇವಾ ಟ್ರಸ್ಟ್, ರಾಜ್ಯ ಕಾರ್ಮಿಕ ಅಸಂಘಟಿತ ಯೂನಿಯನ್, ಗೌಳಿಗರ ಸಂಘ, ಜಯ ಕರ್ನಾಟಕ ಜನಪರ ವೇದಿಕೆ, ತಾಲ್ಲೂಕು ಬ್ರಾಹ್ಮಣ ಮಹಾಸಭಾ ಸೇರಿದಂತೆ ಹಲವು ಸಂಘಟನೆಗಳು ಪಾಲ್ಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.