ಹಂಪಿ (ಹೊಸಪೇಟೆ): ಇಲ್ಲಿನ ಗಾಯತ್ರಿ ಪೀಠದ ಪ್ರಧಾನ ವೇದಿಕೆಯಲ್ಲಿ ಶನಿವಾರ ರಾತ್ರಿ ಮೈನಡುಗುವ ಚಳಿಯಲ್ಲಿ ಗಾಯಕ ರಘು ದೀಕ್ಷಿತ್ ಅವರು ಸಂಗೀತದ ಮಿಂಚು ಹರಿಸಿದರು. ಅದರ ಮೂಲಕ ಅಲ್ಲಿದ್ದವರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು.

ಫ್ಯೂಸನ್‌ನಲ್ಲಿ ಕನ್ನಡದ ಜಾನಪದ ಹಾಗೂ ಸಿನಿಮಾ ಗೀತೆಗಳನ್ನು ಹಾಡಿ ಜನರನ್ನು ರಂಜಿಸಿದರು. ‘ಕೊಡಗನ ಕೋಳಿ ನುಂಗಿತ್ತಾ’, ‘ಲೋಕದ ಚಿಂತಿ’, ‘ ಗುಡುಗುಡಿಯಾ ಸೆ’, ‘ನೀನೇ ಬೇಕು’ ಹಾಡುಗಳನ್ನು ಏರಿದ ಧ್ವನಿಯಲ್ಲಿ ಹಾಡಿ ಎಲ್ಲರ ಮನಸೂರೆಗೊಳಿಸಿದರು.
ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರು ಅವರ ಸಂಗೀತಕ್ಕೆ ಮಾರು ಹೋದರು. ಎಲ್ಲ ಮೈಮರೆತು ಹೆಜ್ಜೆ ಹಾಕಿದರು. ಶುಕ್ರವಾರ ಜನರಿಲ್ಲದೇ ಬಿಕೋ ಎನ್ನುತ್ತಿದ್ದ ಗಾಯತ್ರಿ ಪೀಠದ ಎದುರು ಶನಿವಾರ ರಾತ್ರಿ ಕಿಕ್ಕಿರಿದು ಜನ ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.