ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ | ಒಮ್ಮೆಯಷ್ಟೇ ಸುರಿದ ಬಿರುಸಿನ ಮಳೆ

Published 13 ಜೂನ್ 2024, 16:01 IST
Last Updated 13 ಜೂನ್ 2024, 16:01 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರ ಸಹಿತ ಜಿಲ್ಲೆಯ ಹಲವೆಡೆ ಗುರುವಾರವೂ ಸಾಧಾರಣ ಮಳೆ ಸುರಿಯಿತು. ಮರಿಯಮ್ಮನಹಳ್ಳಿಯಲ್ಲಿ ಮರವೊಂದು ಉರುಳಿ ಬಿದ್ದ ಕಾರಣ 9 ಮತ್ತು 10ನೇ ವಾರ್ಡ್‌ನಲ್ಲಿ 9 ವಿದ್ಯುತ್ ಕಂಬಗಳು ಮುರಿದು ಬಿದ್ದವು.

ನಗರದಲ್ಲಿ ಮಧ್ಯಾಹ್ನ ಸುಮಾರು ಒಂದು ಗಂಟೆ ಬಿರುಸಿನ ಮಳೆ ಸುರಿಯಿತು. ಮತ್ತೆ ಮಳೆ ರಭಸವಾಗಿ ಸುರಿಯದ ಕಾರಣ ತಗ್ಗು ಪ್ರದೇಶಗಳ ಮನೆಯ ಮಂದಿ ನೆಮ್ಮದಿಯ ನಿಟ್ಟಿಸಿರು ಬಿಟ್ಟರು.

ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ 3,215 ಕ್ಯುಸೆಕ್‌ನಷ್ಟಿದ್ದು, ಜಲಾಶಯದಲ್ಲಿ ಇದೀಗ 5.59 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಹೊಸಪೇಟೆ ಪ್ರವಾಸಿ ಮಂದಿರದ ಬಳಿ 5.64 ಸೆಂ.ಮೀ., ಟಿ.ಬಿ.ಡ್ಯಾಂನಲ್ಲಿ 5.15 ಸೆಂ.ಮೀ., ರೈಲ್ವೆ ನಿಲ್ದಾಣದಲ್ಲಿ 4.85 ಸೆಂ.ಮೀ., ಗಾಧಿಗನೂರಿನಲ್ಲಿ 4.72 ಸೆಂ.ಮೀ., ಮರಿಯಮ್ಮನಹಳ್ಳಿಯಲ್ಲಿ 2.35 ಸೆಂ.ಮೀ.ಮಳೆಯಾಗಿದೆ.

ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಗುರುವಾರ ಸಂಜೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಪಟ್ಟಣದ 9 10ನೇ ವಾರ್ಡ್‌ನಲ್ಲಿ ಮರ ಉರುಳಿ ಬಿದ್ದು ಸುಮಾರು 9 ವಿದ್ಯುತ್ ಕಂಬಗಳು ನೆಲಕ್ಕುರುಳಿದವು
ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಗುರುವಾರ ಸಂಜೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಪಟ್ಟಣದ 9 10ನೇ ವಾರ್ಡ್‌ನಲ್ಲಿ ಮರ ಉರುಳಿ ಬಿದ್ದು ಸುಮಾರು 9 ವಿದ್ಯುತ್ ಕಂಬಗಳು ನೆಲಕ್ಕುರುಳಿದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT