ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಯಲ್ಲಿ ಭೀಕರ ಅಪಘಾತ: ನೀರಾವರಿ ಆಯೋಗದ ನಿರ್ದೇಶಕರು ಸೇರಿ ನಾಲ್ವರ ಸಾವು

Last Updated 1 ಏಪ್ರಿಲ್ 2021, 10:27 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ (ಹೊಸಪೇಟೆ ತಾಲ್ಲೂಕು): ಸಮೀಪದ ಹಾರುವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಗುರುವಾರ ಮಧ್ಯಾಹ್ನ ಎರಡು ಇನ್ನೊವಾ ಕಾರುಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇಂದ್ರ ನೀರಾವರಿ ಆಯೋಗದ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಆರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ನೀರಾವರಿ ಆಯೋಗದಲ್ಲಿ ನಿರ್ದೇಶಕರಾಗಿರುವ ಬೆಂಗಳೂರಿನ ರಾಮಸ್ವಾಮಿ (50), ಜಿತೇಂದ್ರ (50) ಹಾಗೂ ತಿಪಟೂರಿನ ಕಾವ್ಯ (30), ಶರಣಬಸವ (10) ಮೃತರು. ಸರ್ಕಾರಿ ಇನ್ನೊವಾ ಕಾರಿನ ಚಾಲಕ ಅನ್ವರ್, ಮತ್ತೊಂದು ಕಾರಿನ ಚಾಲಕ ಗಿರೀಶ್, ಶಿವಲೀಲಾ, ಸಿದ್ದಲಿಂಗೇಶ್, ಸುವರ್ಣ, ಮಂಜುಶ್ರೀ ಗಾಯಗೊಂಡಿದ್ದು, ಹೊಸಪೇಟೆ ಸರ್ಕಾರಿ ಆಸ್ಪತ್ರೆ ಗೆ ಕೊಂಡೊಯ್ಯಲಾಗಿದೆ.

‘ಏಳು ಜನರಿದ್ದ ಇನ್ನೊವಾ ಕಾರು ಕುಷ್ಟಗಿಯಿಂದ ಬೆಂಗಳೂರಿಗೆ ಹೊರಟಿತ್ತು. ಹಾರುವನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿ ಹೊಡೆದು, ರಸ್ತೆ ವಿಭಜಕ ದಾಟಿಕೊಂಡು ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅಧಿಕಾರಿಗಳಿದ್ದ ಕಾರು ಬೆಂಗಳೂರಿನಿಂದ ಬಾಗಲಕೋಟೆಗೆ ಹೊರಟಿತ್ತು. ಒಟ್ಟು ಮೂರು ಜನ ಅದರಲ್ಲಿ ಇದ್ದರು. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಇಬ್ಬರು ಅಧಿಕಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದರು. ಇನ್ನಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಪ್ರಾಣ ಬಿಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT