ಶನಿವಾರ, ಜೂನ್ 19, 2021
22 °C

ಸರಳವಾಗಿ ಶಂಕರಾಚಾರ್ಯರ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ):‌ ತಾಲ್ಲೂಕು ಆಡಳಿತದಿಂದ ಸೋಮವಾರ ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ಶಂಕರಾಚಾರ್ಯರ ಜಯಂತಿ ಸರಳ ರೀತಿಯಲ್ಲಿ ಆಚರಿಸಲಾಯಿತು.

ಕೆಎಎಸ್ ಪ್ರೊಬೆಷನರಿ ಅಧಿಕಾರಿ ಹನುಮಂತಪ್ಪ ಸಿರಟ್ಟಿ ಅವರು ಶಂಕರಾಚಾರ್ಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಗ್ರೇಡ್- 2 ತಹಶೀಲ್ದಾರ್ ಮೇಘಾ, ಶಿರಸ್ತೇದಾರ್ ರಮೇಶ್, ಮಂಜುನಾಥ ಇದ್ದರು.

ಶಂಕರ ಜ್ಞಾನ ಮಂದಿರ:

ಇಲ್ಲಿನ ಎಂ.ಜೆ. ನಗರದ ಶಂಕರ ಜ್ಞಾನ ಮಂದಿರದಲ್ಲಿ ಆದಿ ಶಂಕರಾಚಾರ್ಯ ಜಯಂತಿ ಸರಳವಾಗಿ ಆಚರಿಸಲಾಯಿತು. ಶಂಕರಾಚಾರ್ಯರ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಉದ್ಯಮಿ ಪಂತರ್ ಜಯಂತ್ ಮಾತನಾಡಿ, ‘ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ತತ್ವದಡಿ ಅವರ ಸಂಪ್ರದಾಯಗಳನ್ನು ಸರ್ವರೂ ಬೆಳೆಸಿಕೊಳ್ಳುವ ಸಲುವಾಗಿ ಶಂಕರ ಜ್ಞಾನ ಮಂದಿರವನ್ನು 2004ರಲ್ಲಿ ನಿರ್ಮಿಸಲಾಯಿತು. ಪ್ರತಿವರ್ಷ ಶಂಕರಾಚಾರ್ಯರ ಜಯಂತಿಯನ್ನು ಅಚರಿಸಿಕೊಂಡು ಬರಲಾಗುತ್ತಿದ್ದು, ಕೋವಿಡ್‌ನಿಂದ ಈ ಬಾರಿ ಸರಳವಾಗಿ ಆಚರಿಸಿ, ಬಡ 108 ಮಹಿಳೆಯರಿಗೆ ಉಚಿತವಾಗಿ ಸೀರೆ ವಿತರಿಸಲಾಗಿದೆ’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು