ಹೊಸಪೇಟೆ (ವಿಜಯನಗರ): 72ನೇ ಅಖಿಲ ಭಾರತ ಸಹಕಾರ ಸಪ್ತಾಹದ 4ನೇ ದಿನದ ರಾಜ್ಯಮಟ್ಟದ ಕಾರ್ಯಕ್ರಮ ನಗರದ ಸುರಭಿ ಕಲ್ಯಾಣಮಂಟಪದಲ್ಲಿ ನ.17ರಂದು ನಡೆಯಲಿದೆ, ಉಭಯ ಜಿಲ್ಲೆಗಳಿಂದ ಈ ಬಾರಿ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಎಂಟು ಮಂದಿಯನ್ನು ಅಂದು ಸನ್ಮಾನಿಸಲಾಗುವುದು ಎಂದು ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಬಿಡಿಸಿಸಿ) ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಈ ಹಿಂದೆ ಉಭಯ ಜಿಲ್ಲೆಗಳ 17 ಮಂದಿ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು. ಅವರನ್ನು ಸಹ ಅದೇ ದಿನ ಸನ್ಮಾನಿಸಲಾಗುವುದು, ಅದಕ್ಕೆ ಮೊದಲಾಗಿ ಬಿಡಿಸಿಸಿ ಬ್ಯಾಂಕ್ನಿಂದ ಸುರಭಿ ಕಲ್ಯಾಣಮಂಟಪದ ವರೆಗೆ ಹತ್ತು ಕಲಾತಂಡಗಳ ಜತೆಯಲ್ಲಿ ಸನ್ಮಾನಿತರ ಭವ್ಯ ಮೆರವಣಿಗೆ ನಡೆಯಲಿದೆ ಎಂದರು.

‘ಆತ್ಮನಿರ್ಭರ ಭಾರತದ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು’ ಎಂಬ ಧ್ಯೇಯದೊಂದಿಗೆ ಈ ಬಾರಿಯ ಸಹಕಾರ ಸಪ್ತಾಹ ನಡೆಯಲಿದೆ. 4ನೇ ದಿನದ ರಾಜ್ಯಮಟ್ಟದ ಕಾರ್ಯಕ್ರಮ ನಗರದಲ್ಲಿ ನಡೆಯಲಿದೆ. ‘ರಾಷ್ಟ್ರೀಯ ಸಹಕಾರ ನೀತಿಯ ಪರಿಸರ ವ್ಯವಸ್ಥೆ ಭಾರತದ ಸಹಕಾರ ಸಂಸ್ಥೆಗಳ ರಚನಾತ್ಮಕ ಮಾರ್ಗಸೂಚಿ’ ಎಂಬ ವಿಷಯದ ಮೇಲೆ ಇಲ್ಲಿನ ಕಾರ್ಯಕ್ರಮ ಕೇಂದ್ರೀಕೃತವಾಗಿರುತ್ತದೆ. ಸಹಕಾರ ಸಂಘಗಳ ನಿವೃತ್ತ ಹೆಚ್ಚುವರಿ ನಿಬಂಧಕ ಐ.ಎಸ್.ಗಿರಡ್ಡಿ ವಿಶೇಷ ಉಪನ್ಯಾಸ ನೀಡುವರು ಎಂದರು.

ಅಪೆಕ್ಸ್ ಬ್ಯಾಂಕ್ ಒಟ್ಟಾರೆ ಕಾರ್ಯಕ್ರಮವನ್ನು ಸಂಘಟಿಸಲಿದೆ. ಜಿಲ್ಲಾ ಜಿಲ್ಲಾ ಸಹಕಾರ ಯೂನಿಯನ್, ಬಿಡಿಸಿಸಿ, ಸಹಕಾರ ಇಲಾಖೆ, ಹಾಲು ಒಕ್ಕೂಟ ಹಾಗೂ ಇತರ ಹಲವು ಸಹಕಾರ ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಹಕಾರ ವಸ್ತು ಪ್ರದರ್ಶನ, ಉತ್ತಮ ಸಹಕಾರ ಸಂಘಗಳಿಗೆ, ಉತ್ತಮ ಸಹಕಾರಿಗಳಿಗೆ ಸನ್ಮಾನ, ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾಜಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಪಾಲ್ಗೊಳ್ಳುವುದು ನಿಶ್ಚಿತ. ಜತೆಗೆ ಹಲವು ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಪ್ಪೇಸ್ವಾಮಿ ವಿವರಿಸಿದರು.

ಅಖಂಡ ಜಿಲ್ಲೆಯಲ್ಲಿ 7 ದಿನ ಕಾರ್ಯಕ್ರಮ: ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜೆ.ಎಂ.ಶಿವಪ್ರಸಾದ್ ಮಾತನಾಡಿ, ರಾಜ್ಯಮಟ್ಟದಂತೆ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಏಳು ದಿನ ಪ್ರತ್ಯೇಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಮೊದಲ ದಿನ ಧ್ವಜಾರೋಹಣ ಹಾಗೂ ಹಂಪಿಯಲ್ಲಿ ಭುವನೇಶ್ವರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ನ.15ರಂದು ಬೈಲೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ, 16ರಂದು ಹೂವಿನಹಡಗಲಿಯ ಮಹಾವೀರ ಅಲ್ಪಸಂಖ್ಯಾತರ ಸಹಕಾರ ಸಂಘದ ಸಹಯೋಗದಲ್ಲಿ, 17ರಂದು ರಾಜ್ಯಮಟ್ಟದ ಕಾರ್ಯಕ್ರಮ ಹೊಸಪೇಟೆಯಲ್ಲಿ, 18ರಂದು ಬಿಡಿಸಿಸಿ ಬ್ಯಾಂಕ್ ಸಿರಗುಪ್ಪಾದಲ್ಲಿ, 19ರಂದು ಹರಪನಹಳ್ಳಿಯಲ್ಲಿ ಹಾಗೂ 20ರಂದು ಸಮಾರೋಪ ಕಾರ್ಯಕ್ರಮ ತಂಬ್ರಹಳ್ಳಿಯ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಬಿಡಿಸಿಸಿ ಬ್ಯಾಂಕ್ ಸಿಇಒ ಬಿ.ಜಯಪ್ರಕಾಶ, ಸಹಕಾರ ಸಂಘಗಳ ಉಪನಿಬಂಧಕ ಜಿ.ಎಂ.ವೀರಭದ್ರಯ್ಯ ಇದ್ದರು.

‘ಸಹಕಾರ ರತ್ನ’ ಪುರಸ್ಕೃತರು

ಹೊಸಪೇಟೆಯ ಗೋಸಲ ಭರಮಪ್ಪ, ಬಿ.ಜಿ.ತಿರುಮಲ, ಗೌಳಿ ಕುಮಾರಸ್ವಾಮಿ, ಬಳ್ಳಾರಿ ಜಿಲ್ಲೆಯ ಎನ್.ಶರಣಪ್ಪ ಹಲಬನೂರು, ವೆಂಕಟೇಶ್ ಹೆಗಡೆ, ಎನ್.ಧನಂಜಯ, ಆರ್.ಗುರುಸ್ವಾಮಿ ಮತ್ತು ಯು.ವೆಂಕಟೇಶ ಈ ಬಾರಿಯ ರಾಜ್ಯಮಟ್ಟದ ‘ಸಹಕಾರ ರತ್ನ’ ಪ್ರಶಸ್ತಿಗೆ ಭಾಜನರಾದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.