ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ಕೊಚ್ಚಿಹೋಗಿರುವ 19ನೇ ಕ್ರಸ್ಟ್‌ಗೇಟ್ ಇದ್ದ ಸ್ಥಳದಲ್ಲಿ ತಾತ್ಕಾಲಿಕ ಗೇಟ್ ನಿರ್ಮಾಣ ಸಂಬಂದ ಬುಧವಾರ ಜಿಲ್ಲಾ ಉಸ್ತುವರಿ ಸಚಿವ ಜಮೀರ್ ಅಹ್ಮದ್ ಖಾನ್ ಪೂಜೆ ನೆರವೇರಿಸಿದರು.
ತಾಂತ್ರಿಕ ತಜ್ಞ ಕನ್ನಯ್ಯ ನಾಯ್ಡು ಅವರ ಜತೆ ತಡೆ ಗೇಟ್ ನಿರ್ಮಾಣ ಕುರಿತು ಚರ್ಚಿಸಿದರು. ಎರಡು ದಿನಗಳಲ್ಲಿ ಗೇಟ್ ನಿರ್ಮಾಣ ಕಾರ್ಯ ಪೂರ್ಣ ಗೊಳಿಸುವುದಾಗಿ ಇದೇ ಸಂದರ್ಭದಲ್ಲಿ ಕನ್ನಯ್ಯ ನಾಯ್ಡು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಎಸ್‌ಪಿ ಶ್ರೀಹರಿಬಾಬು ಬಿ.ಎಲ್. ಇದ್ದರು.
ಗೇಟ್ ಆಗಮನಕ್ಕೆ ಕ್ಷಣಗಣನೆ: ಹೊಸಹಳ್ಳಿಯ ಹಿಂದೂಸ್ತಾನ್ ಸಂಸ್ಥೆಯ ಶೆಡ್‌ನಿಂದ ಒಂದು ಗೇಟ್ ಯಾವುದೇ ಕ್ಷಣದಲ್ಲಿ ಅಣೆಕಟ್ಟೆಯತ್ತ ಹೊರಡಲಿದ್ದು, ಜನರಲ್ಲಿ ಕುತೂಹಲ ಮೂಡಿದೆ.