ಕಾನಹೊಸಹಳ್ಳಿ (ವಿಜಯನಗರ ಜಿಲ್ಲೆ): ಆಹಾರ, ನೀರು ಅರಸಿಕೊಂಡು ಎರಡು ಕರಡಿಗಳು ಸಮೀಪದ ಚಿಕ್ಕಜೋಗಿಹಳ್ಳಿ ಗ್ರಾಮದ ತೋಟದ ಮನೆಗೆ ಲಗ್ಗೆ ಇಟ್ಟಿವೆ.

ಚಿಕ್ಕಜೋಗಿಹಳ್ಳಿಯ ಲಕ್ಷ್ಮಣ ನಾಯಕ ಎಂಬುವವರ ತೋಟದ ಮನೆ ಬಳಿ ಶನಿವಾರ ರಾತ್ರಿ ಕರಡಿಗಳು ಕಾಣಿಸಿಕೊಂಡಿವೆ. ಅವುಗಳ ಶಬ್ದ ಕೇಳಿದ ಲಕ್ಷ್ಮಣ ನಾಯಕ, ಮೊಬೈಲ್‌ನಲ್ಲಿ ಚಲನವಲನ ಸೆರೆ ಹಿಡಿದಿದ್ದಾರೆ.

ಇತ್ತೀಚೆಗೆ ಗ್ರಾಮದ ಪೆಟ್ರೋಲ್ ಬಂಕ್ ನಲ್ಲಿ ಕರಡಿ ಪ್ರತ್ಯಕ್ಷವಾಗಿತ್ತು, ಭೀಮಸಮುದ್ರ, ಕಡಕೋಳ, ಮಡ್ಲಾನಾಯಕನಹಳ್ಳಿ ಬಳಿ ರೈತರು ಕರಡಿ ಓಡಿಸುವ ವಿಡಿಯೋ ವೈರಲ್ ಆಗಿತ್ತು. ಬೇಸಿಗೆ ಇರುವುದರಿಂದ ಕರಡಿಗಳು ಆಹಾರ, ನೀರು ಅರಸಿಕೊಂಡು ಕಾಡಂಚಿನ ಗ್ರಾಮಗಳಿಗೆ ಬರುತ್ತಿವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕರಡಿಗಳ ಓಡಾಟ ಹೆಚ್ಚಾಗಿರುವುದರಿಂದ ರೈತರು ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.