ಮಂಗಳವಾರ, ಜನವರಿ 18, 2022
15 °C

ಹಂಪಿಗೆ ಕೇಂದ್ರ ಉಕ್ಕು ಖಾತೆ ಸಚಿವ ರಾಮಚಂದ್ರ ಪ್ರಸಾದ್‌ ಸಿಂಗ್‌ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕೇಂದ್ರ ಉಕ್ಕು ಖಾತೆ ಸಚಿವ ರಾಮಚಂದ್ರ ಪ್ರಸಾದ್‌ ಸಿಂಗ್‌ ಅವರು ಬುಧವಾರ ಸಂಜೆ ಹಂಪಿಗೆ ಭೇಟಿ ನೀಡಿದರು.

ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿ ವಿರೂಪಾಕ್ಷನಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದರು. ಇದಕ್ಕೂ ಮುನ್ನ ಅವರಿಗೆ ದೇವಸ್ಥಾನದ ಆನೆ ಲಕ್ಷ್ಮಿ ಹೂಮಾಲೆ ಹಾಕಿ ಸ್ವಾಗತಿಸಿತು. ಪ್ರವಾಸಿ ಮಾರ್ಗದರ್ಶಿ ಮಂಜುನಾಥಗೌಡ ಅವರು ದೇಗುಲದ ಮಹತ್ವ ವಿವರಿಸಿದರು. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶ್‌ ರಾವ್‌ ಇದ್ದರು. ಹಂಪಿ ಭೇಟಿಗೂ ಮೊದಲು ಸಚಿವರು ಬಳ್ಳಾರಿ ಜಿಲ್ಲೆಯ ತೋರಣಗಲ್‌ ಬಳಿಯ ಜೆಎಸ್‌ಡಬ್ಲ್ಯೂ ವಾಯುನೆಲೆಗೆ ಬಂದಿಳಿದರು. ಬಳಿಕ ನೇರ ಹಂಪಿಗೆ ಬಂದರು.

ಮೂರು ದಿನ ಜೆಎಸ್‌ಡಬ್ಲ್ಯೂ ಅತಿಥಿ ಗೃಹದಲ್ಲಿ ತಂಗಲಿರುವ ಸಚಿವರು, ಉಕ್ಕು ಘಟಕ, ಕ್ರೀಡಾ ಸಮುಚ್ಚಯ, ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ), ಕುಮಾರಸ್ವಾಮಿ ಗಣಿ ಪ್ರದೇಶ, ಪೆಲೆಟ್‌ ಘಟಕಗಳಿಗೆ ಭೇಟಿ ನೀಡುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು