ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರದಲ್ಲಿ ಸಂಭ್ರಮದ ವಡಕರಾಯ ರಥೋತ್ಸವ

Last Updated 16 ಮೇ 2022, 13:58 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ವಡಕರಾಯ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ ಪ್ರಯುಕ್ತ ಸೋಮವಾರ ಸಂಜೆ ಸಂಭ್ರಮದ ನಡುವೆ ರಥೋತ್ಸವ ಜರುಗಿತು.

ಸೋಮವಾರ ಸಂಜೆ ಮೇನ್ ಬಜಾರ್‌ ರಥಬೀದಿಯಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ತೇರು ಎಳೆಯಲಾಯಿತು. ಬೆಳಿಗ್ಗೆ ದೇವಸ್ಥಾನದಲ್ಲಿ ಹೋಮ ಹವನ, ಮಡಿ ತೇರು ಎಳೆಯಲಾಯಿತು. ಸಂಜೆ ವಡಕರಾಯ ದೇವಸ್ಥಾನದಿಂದ ಪಾದಗಟ್ಟೆ ಆಂಜನೇಯ ದೇವಸ್ಥಾನದವರೆಗೆ ತೇರು ಎಳೆಯಲಾಯಿತು. ಕಬ್ಬೇರಪೇಟೆ, ಚಿತ್ರಕೇರಿ ಯುವಕರು ಸನ್ನೆ ಹಾಕಿದರು. ರಥೋತ್ಸವಕ್ಕೆ ನೂರಾರು ಜನ ಸಾಕ್ಷಿಯಾದರು. ಮೇನ್‌ ಬಜಾರ್‌ನಲ್ಲಿ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು. ನಗರದ ರಾಮಣ್ಣ ಚಿನ್ನಿ ₹1.1 ಲಕ್ಷ, ಪವನ್ ಶಾನಬಾಗ ₹35 ಸಾವಿರಕ್ಕೆ ಹರಾಜಿನಲ್ಲಿ ದೇವರ ಧ್ವಜ ಪಡೆದರು. ಕೋವಿಡ್‌ನಿಂದ ಎರಡು ವರ್ಷ ರಥೋತ್ಸವ ನಡೆದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT