ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಜಲಾಶಯ: ಒಂದೇ ದಿನದಲ್ಲಿ 1.50 ಟಿಎಂಸಿ ಅಡಿ ನೀರು ಸಂಗ್ರಹ

Published 11 ಜುಲೈ 2023, 15:43 IST
Last Updated 11 ಜುಲೈ 2023, 15:43 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ ಕ್ರಮೇಣ ಹೆಚ್ಚಳವಾಗುತ್ತಿದ್ದು, ಒಳಹರಿವಿನ ಪ್ರಮಾಣ 17,761 ಕ್ಯುಸೆಕ್‌ನಷ್ಟಿದೆ. ಒಂದು ದಿನದಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ 1.50 ಟಿಎಂಸಿ ಅಡಿಯಷ್ಟು ಹೆಚ್ಚಳವಾಗಿದೆ.

ಸೋಮವಾರ ಜಲಾಶಯದಲ್ಲಿ 3.91 ಟಿಎಂಸಿ ಅಡಿ ನೀರಿತ್ತು. ಮಂಗಳವಾರ ಅದರ ಪ್ರಮಾಣ 5.41 ಟಿಎಂಸಿ ಅಡಿಯಷ್ಟಾಗಿದೆ. ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಮೂರು ಅಡಿಗಳಷ್ಟು ಹೆಚ್ಚಿದೆ. ಸೋಮವಾರ 1,578.79 ಅಡಿ ಇದ್ದುದು ಮಂಗಳವಾರ 1,581.82 ಅಡಿಗೆ ಏರಿಕೆಯಾಗಿದೆ.

ಕಳೆದ ವರ್ಷ ಇದೇ  ದಿನ ಜಲಾಶಯದಲ್ಲಿ 88.35 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿತ್ತು ಹಾಗೂ ಅಣೆಕಟ್ಟೆಯ ನೀರಿನ ಮಟ್ಟ 1,628.45 ಅಡಿಯಷ್ಟಿತ್ತು. 

ಈ ಬಾರಿ ಮುಂಗಾರು ಆಗಮನ ಸುಮಾರು ಒಂದು ತಿಂಗಳಷ್ಟು ವಿಳಂಬವಾಗಿರುವುದರಿಂದ ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹ ಸಹ ವಿಳಂಬವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT