ವಿಜಯಪುರದಲ್ಲಿ ಹತ್ತಿ ವ್ಯಾಪಾರ ಸೋಮವಾರದಿಂದ ಆರಂಭ: ರೈತರಲ್ಲಿ ಮೂಡಿದ ಸಂತಸ

ವಿಜಯಪುರ: ಜಿಲ್ಲೆಯಲ್ಲಿ ಸೋಮವಾರದಿಂದ ಹತ್ತಿ ವ್ಯಾಪಾರ ಪುನರಾರಂಭಿಸುವುದಾಗಿ ಹತ್ತಿ ವ್ಯಾಪಾರಿಗಳ ಸಂಘ ತಿಳಿಸಿದೆ.
ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ಇಲ್ಲಿನ ಎಪಿಎಂಸಿ ಯಾರ್ಡ್‌ನಲ್ಲಿ ಇಲ್ಲಿಯವರೆಗೆ ಬಂದ್ ಮಾಡಲಾಗಿದ್ದ ಹತ್ತಿ ವ್ಯಾಪಾರ, ವಹಿವಾಟನ್ನು ಮೇ 4ರಿಂದ ಪುನರಾಂಭಿಸಲು ನಿರ್ಧರಿಸಲಾಗಿದೆ ಎಂದು ವಿಜಯಪುರ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಎಸ್.ಬಿಜ್ಜರಗಿ ತಿಳಿಸಿದ್ದಾರೆ.
ವ್ಯಾಪಾರಸ್ಥರು, ರೈತರು, ಗುಮಾಸ್ತರು, ಹಮಾಲರು, ತಳದವರು, ಲಾರಿ ಹಮಾಲರು, ವಾಹನ ಚಾಲಕರು ತಪ್ಪದೇ ಮಾಸ್ಕ್ ಧರಿಸಿ ಮತ್ತು ನಿಗದಿತ ಅಂತರ ಕಾಯ್ದುಕೊಂಡು ವ್ಯಾಪಾರ ಪ್ರಾರಂಭಿಸುವ ಮೂಲಕ ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.