ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾಪುರ: ಐದು ಕ್ವಿಂಟಾಲ್‌ ಉಳ್ಳಾಗಡ್ಡಿಗೆ ₹ 2 !

Last Updated 26 ಫೆಬ್ರುವರಿ 2023, 14:14 IST
ಅಕ್ಷರ ಗಾತ್ರ

ಸೋಲಾಪುರ: ಜಿಲ್ಲೆ ಸೇರಿದಂತೆ ಮಹಾರಾಷ್ಟ್ರ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಈರುಳ್ಳಿ ದರ ಪಾತಾಳಕ್ಕೆ ಕುಸಿತವಾಗಿದ್ದು, ರೈತನಿಗೆ ಕಣ್ಣೀರು ತರಿಸಿದೆ.

ಫೆ.17 ರಂದು ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರೊಬ್ಬರು ಮಾರಾಟ ಮಾಡಿದ ಐದು ಕ್ವಿಂಟಾಲ್‌ ಈರುಳ್ಳಿಗೆ ₹2 ಚೆಕ್ ನೀಡಲಾಗಿದೆ!

ಈ ಪ್ರಕರಣದ ಕೆಲವೇ ದಿನಗಳ ಮೊದಲು ಫೆ. 1ರಂದು ಜಿಲ್ಲೆಯ ದಾವತಪುರದ ರೈತ ಬಂಡು ಭಾಂಗೆ ಎಂಬುವವರು ಈರುಳ್ಳಿ ವ್ಯಾಪಾರಿ ಎಸ್. ಎನ್. ಜಾವಳೆ ಅವರಿಗೆ 825 ಕೆ.ಜಿ ಈರುಳ್ಳಿ ಮಾರಾಟ ಮಾಡಿದ್ದಾರೆ. ವ್ಯಾಪಾರಿ ಪ್ರತಿ ಕ್ವಿಂಟಲ್ ಗೆ ₹100ರಂತೆ ಒಟ್ಟು ₹ 825 ದರ ನೀಡಿ ಕಳುಹಿಸಿದ್ದಾರೆ. ಅದರಲ್ಲಿ ಹಮಾಲಿ ಕೂಲಿ ₹ 65.18, ತೂಕದ ಖರ್ಚು ₹ 38.78, ಇತರ ಹಮಾಲಿ ₹25.50, ವಾಹನದ ಬಾಡಿಗೆ ₹697 ಸೇರಿದಂತೆ ಒಟ್ಟು ₹826 ನೀಡಿದ್ದಾರೆ. ಅಲ್ಲದೇ, ರೈತ ಕೈಯಿಂದ ವ್ಯಾಪಾರಿಗೆ ₹1 ನೀಡಿ ಬರಿಗೈಲಿ ಮನೆಗೆ ಹಿಂದಿರುಗಿದ್ದಾರೆ. ಈ ಬಿಲ್ಲಿನ ಮೊತ್ತದ ಪಾವತಿ ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ಗಳಲ್ಲಿ ಜೋರಾಗಿ ಹರಿದಾಡುತ್ತಿದೆ.

ಇದನ್ನರಿತ ಸ್ವಾಭಿಮಾನಿ ಶೇತಕರಿ ಸಂಘಟನೆ ಸರ್ಕಾರ ರೈತರಿಗೆ ಪ್ರತಿ ಕ್ವಿಂಟಲ್ ಗೆ ₹500 ಸಹಾಯಧನ ನೀಡಬೇಕೆಂದು ಅಗ್ರಹಿಸಿದೆ.

ಮಾರುಕಟ್ಟೆಯಲ್ಲಿ ಈರುಳ್ಳಿ ಕೆಜಿಗೆ ₹15ರಂತೆ ಮಾರಾಟವಾಗುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಮಧ್ಯವರ್ತಿ ವ್ಯಾಪಾರಿಗಳು ರೈತರಿಂದ ಕೆ.ಜಿಗೆ ₹1, ₹2 ರಂತೆ ಮಾರಾಟ ಮಾಡಿ ಖರೀದಿಸಿ, ರೈತರನ್ನು ಮೋಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ತ್ವರಿತವಾಗಿ ರೈತರಿಗೆ ಧನ ಸಹಾಯ ಮಾಡುವ ವ್ಯವಸ್ಥೆ ಮಾಡಬೇಕು ಇಲ್ಲದಿದ್ದರೆ ತೀವ್ರ ಆಂದೋಲನ ಮಾಡುವುದಾಗಿ ಸೋಲಾಪುರ ಸ್ವಾಭಿಮಾನಿ ಶೇತಕರಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ವಿಜಯ ರಣದಿವೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT