ವಿಜಯಪುರ: ಜೋಗಿ ಸಮಾಜಕ್ಕೆ ದೊರೆಯಬೇಕಿರುವ ಸಾಮಾಜಿಕ ನ್ಯಾಯ ಕಲ್ಪಿಸಲು ಬರುವ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು.

ನಗರದ ಪೊಲೀಸ್ ಕ್ವಾಟರ್ಸ್ ಹತ್ತಿರದ ಜೋಗಿ ಗಲ್ಲಿಯ ಮರಗಮ್ಮ ದೇವಿ ದೇವಸ್ಥಾನ ಉದ್ಘಾಟಿಸಿ ಮಾತನಾಡಿದ ಅವರು, ಜೋಗಿ ಸಮಾಜ ಎಂದಿಗೂ ನಮ್ಮ ಕೈಬಿಟ್ಟಿಲ್ಲ. ಪ್ರತಿ ಚುನಾವಣೆಯಲ್ಲೂ ಬೆಂಬಲಿಸಿದೆ. ಮರಗಮ್ಮ ದೇವಸ್ಥಾನಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ₹10 ಲಕ್ಷ ನೀಡುವುದಾಗಿ ಘೋಷಿಸಿದರು.

ಜನಗಣತಿ ಆದರೆ ಎಲ್ಲರಿಗೂ ಮೀಸಲಾತಿ ಪಡೆಯಲು ಅನುಕೂಲ ಆಗುತ್ತದೆ. ಹೀಗಾಗಿ ಜನಗಣತಿಗೆ ಬಂದಾಗ ಸರಿಯಾಗಿ ಬರೆಯಿಸಬೇಕು. 27 ಉಪಜಾತಿಗಳಿರುವ ಈ ಜೋಗಿ ಸಮಾಜಕ್ಕೆ ಈಗಾಗಲೇ ಸಾಮಾಜಿಕ ನ್ಯಾಯ ದೊರೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿಕ್ಕಿಲ್ಲ. ಬರುವ ಅಧಿವೇಶನದಲ್ಲಿ ಧ್ವನಿ ಎತ್ತಿ ತಮಗೆ ನ್ಯಾಯ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಬಳಬಟ್ಟಿಯ ಶ್ರೀಗುರು ಗೋರಕ್ಷಾನಾಥ ಜೋಗಿ ಮಠದ ಯೋಗಿ ನಿವೃತ್ತಿನಾಥ ಅಗೋರಿ, ಮರಗಮ್ಮದೇವಿ ಸೇವಾ ಸಮಿತಿ ಅಧ್ಯಕ್ಷ ರಾಹುಲ್ ಪೂಜಾರಿ, ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಅಖಿಲ ಕರ್ನಾಟಕ ಜೋಗಿ ಸಮಾಜದ ಅಧ್ಯಕ್ಷ ಶಿವಾಜಿ ಮಧುರಕರ, ಮರಗಮ್ಮ ಗುಡಿ ಜೋಗಿ ಸಮಾಜದ ಸೇವಾ ಸಮಿತಿ ಅಧ್ಯಕ್ಷ ನಾನಾ ಕಾಸಾರ, ಉಪಾಧ್ಯಕ್ಷ ಭಗವಾನ ಕಾಸಾರ, ಪದಾಧಿಕಾರಿಗಳು ಇದ್ದರು.

ನಾಟ್ಯ ಮಂದಿರ ನಿರ್ಮಾಣಕ್ಕೆ ಮನವಿ

ನಗರದ ಕಿತ್ತೂರು ರಾಣಿ ಚನ್ನಮ್ಮ ನಾಟ್ಯ ಮಂದಿರ ಪುನರ್ ನಿರ್ಮಾಣಕ್ಕೆ ಅಗತ್ಯ ಇರುವ ₹ 15 ಕೋಟಿ ಅನುದಾನ ಮಂಜೂರಾತಿಗಾಗಿ ವಿಜಯಪುರ ನಗರದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪತ್ರ ಬರೆದಿದ್ದಾರೆ.

ನಗರದ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿ ಪಾಲಿಕೆ ಒಡೆತನದ ಜಾಗದಲ್ಲಿದ್ದ ಕಿತ್ತೂರು ರಾಣಿ ಚನ್ನಮ್ಮ ನಾಟ್ಯ ಮಂದಿರವು ನಾಡಿನ ಅನೇಕ ಚಲನಚಿತ್ರ ನಟ ನಟಿಯರು ಹವ್ಯಾಸಿ ಕಲಾವಿದರಿಗೆ ಅತ್ಯುತ್ತಮ ವೇದಿಕೆ ಆಗಿತ್ತು. ಈಗ ಬೀಳುವ ಹಂತದಲ್ಲಿದ್ದ 90ಕ್ಕೂ ಹೆಚ್ಚು ವರ್ಷಗಳ ಹಳೆಯ ನಾಟ್ಯ ಮಂದಿರ ಹೊಸದಾಗಿ ನಿರ್ಮಾಣ ಮಾಡಲು ನೆಲಸಮಗೊಳಿಸಿ 8 ವರ್ಷಗಳು ಗತಿಸಿದರೂ ಈವರೆಗೆ ನಿರ್ಮಾಣವಾಗಿಲ್ಲ ಎಂದು ತಿಳಿಸಿದ್ದಾರೆ.

ಹಲವು ದಶಕಗಳ ಕಾಲ ಸಾವಿರಾರು ಕಲಾವಿದರ ಕಲೆ ಪ್ರದರ್ಶನಕ್ಕೆ ವೇದಿಕೆ ಆಗಿದ್ದ ಚೆನ್ನಮ್ಮ ನಾಟ್ಯ ಮಂದಿರವನ್ನು ಪುನರ್ ನಿರ್ಮಾಣದ ಅಗತ್ಯವಿದೆ. ಸಚಿವ ಸಂಪುಟ ಸಭೆಯಲ್ಲಿ ಅಗತ್ಯ ಅನುದಾನಕ್ಕೆ ಅನುಮೋದನೆ ನೀಡುವಂತೆ ಅವರು ಪತ್ರದಲ್ಲಿ ವಿನಂತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.