ಭಾನುವಾರ, ಜುಲೈ 25, 2021
22 °C

ವಿಜಯಪುರ: ಕೆಪಿಟಿಸಿಎಲ್ ಎಇಇ ಸಿದ್ಧರಾಮ ಬಿರಾದಾರ ಮನೆ ಮೇಲೆ ಎಸಿಬಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ನಗರದ ಸುಕೂನ್ ಲೇಔಟ್ ನಲ್ಲಿರುವ ಕೆಪಿಟಿಸಿಎಲ್ ಎಇಇ ಸಿದ್ದರಾಮ ಬಿರಾದಾರ ಅವರ ಮನೆ  ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

 ಸಿದ್ದರಾಮ ಬಿರಾದಾರ ಅವರ ಅಳಿಯ ಅರ್ಜುನ್ ಬಿರಾದಾರ ನಿವಾಸದ ಮೇಲೂ ದಾಳಿ ನಡೆಸಿದ ಎಸಿಬಿ ತಂಡ ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ.

ಎಇಇ ಸಿದ್ದರಾಮಗೆ ಸೇರಿದ ವಿಜಯಪುರ ತಾಲ್ಲೂಕಿನ ಲೋಣಿ ಬಿ. ಕೆ ಗ್ರಾಮದಲ್ಲಿನ‌ ನಿವಾಸದ ಮೇಲೆ ಹಾಗೂ ತೋಟದ ಮನೆ‌ ಮೇಲೂ ದಾಳಿ ನಡೆಸಿ, ಪರಿಶೀಲನೆ ನಡಸಿದ್ದಾರೆ. 
ವಿಜಯಪುರ ನಗರದ ಕೆಪಿಟಿಸಿಎಲ್ ಕಚೇರಿಯಲ್ಲೂ  ಎಸಿಬಿ ತಂಡ ಪರಿಶೀಲನೆ ನಡೆಸಿದೆ.

ಎಸಿಬಿ ಡಿಎಸ್ ಪಿ  ಮಂಜುನಾಥ ಗಂಗಲ್ ನೇತೃತ್ವದಲ್ಲಿ ವಿಜಯಪುರ, ಧಾರವಾಡ, ಬೆಳಗಾವಿ ಹಾಗೂ ಬಾಗಲಕೋಟೆ ಎಸಿಬಿ‌ ಇನ್ಸ್‌ಪೆಕ್ಟರ್ ದಾಳಿಯಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ.. ಒಂಬತ್ತು ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ: ರಾಜ್ಯದ ಹಲವೆಡೆ ಶೋಧ
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು