ಸೋಮವಾರ, ನವೆಂಬರ್ 30, 2020
20 °C

ಎಸಿಬಿ ಬಲೆಗೆ ಇಬ್ಬರು ಕಾರ್ಮಿಕ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಪೆಟ್ರೋಲ್‌ ಪಂಪ್‌ನ ಲೇಬರ್‌ ಲೈಸನ್ಸ್‌ ನವೀಕರಣ ಸಂಬಂಧ ಮಂಗಳವಾರ ಲಂಚ ಪಡೆಯುತ್ತಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರ್ಯಪ್ಪ ಡೊಂಬರಮತ್ತೂರ ಮತ್ತು ಕಾರ್ಮಿಕ ನಿರೀಕ್ಷಕಿ ಲಲಿತಾ ರಾಠೋಡ ಅವರು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.  

ಇಂಡಿ ಪಟ್ಟಣದ ರೂಪೇಶ ಶಹಾ ಎಂಬುವವರ ತಾಯಿ ಹೆಸರಿನಲ್ಲಿ ಇರುವ ಪೆಟ್ರೋಲ್‌ ಬಂಕ್‌ನ ಲೇಬರ್‌ ಲೈಸನ್ಸ್‌ ನವೀಕರಣ ಮಾಡಿಲು ₹10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಅಧಿಕಾರಿಗಳು ₹ 5 ಸಾವಿರ ಲಂಚವನ್ನು ಮೊದಲೇ ಪಡೆದುಕೊಂಡಿದ್ದರು. ಬಳಿಕ ಮತ್ತೆ ₹ 5 ಸಾವಿರ ಪಡೆಯುತ್ತಿದ್ದ ವೇಳೆ ಎಸಿಬಿ  ಅಧಿಕಾರಿಗಳು ದಾಳಿ ನಡೆಸಿ, ಬಂಧಿಸಿದ್ದಾರೆ.

ವಿಜಯಪುರ ಎಸಿಬಿ ಪೊಲೀಸ್‌ ಠಾಣೆಯ ಡಿವೈಎಸ್‌ಪಿ ಎಂ.ಕೆ. ಗಂಗಲ್‌ ನೇತೃತ್ವದಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಹರೀಶಚಂದ್ರ, ಪಿ.ಜಿ.ಕವಟಗಿ, ಸಿಬ್ಬಂದಿಗಳಾದ ಮಹೇಶ ಪೂಜಾರಿ, ಸುರೇಶ ಜಾಲಗೇರಿ, ಅಶೋಕ ಸಿಂಧೂರ, ಈರಣ್ಣ ಕನ್ನೂರ, ಮದನ್‌ಸಿಂಗ್‌ ರಜಪೂತ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು