ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧ್ಯಾತ್ಮ ಲೋಕದ ಭಾಸ್ಕರ ಸಿದ್ದೇಶ್ವರ ಶ್ರೀ

ಆಶ್ರಮಕ್ಕೆ ಭೇಟಿ ನೀಡಿದ ತುಮಕೂರು ಸಿದ್ದಗಂಗಾ ಶ್ರೀ
Last Updated 6 ಜನವರಿ 2023, 12:47 IST
ಅಕ್ಷರ ಗಾತ್ರ

ವಿಜಯಪುರ: ತಮ್ಮ ಪ್ರವಚನದ ಮೂಲಕ ಇಡೀ ಮನಕುಲಕ್ಕೆ ಮಾದರಿಯಾಗಿದ್ದ ಸಿದ್ದೇಶ್ವರ ಸ್ವಾಮೀಜಿ ಆಧ್ಯಾತ್ಮ ಲೋಕದ ಭಾಸ್ಕರನಿದ್ದಂತೆ ಎಂದು ತುಮಕೂರು ಸಿದ್ದಗಂಗಾ ಮಠದ ಮಠಾಧೀಶ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ನಗರದ ಜ್ಞಾನಯೋಗಾಶ್ರಮದಲ್ಲಿ ಸಿದ್ಧೇಶ್ವರ ಶ್ರೀಗಳ ಅಂತ್ಯಕ್ರಿಯೆ ನಡೆದ ಸ್ಥಳ ದರ್ಶನ ಮಾಡಿ ನಮನ ಸಲ್ಲಿಸಿದ ಬಳಿಕ ಶುಕ್ರವಾರ ಅವರು ಮಾತನಾಡಿದರು.

ಅನಿವಾರ್ಯ ಕಾರ್ಯಗಳಿಂದ ಸಿದ್ದೇಶ್ವರ ಸ್ವಾಮೀಜಿಗಳ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಂದಿರುವೆ ಎಂದರು.

ಸಿದ್ಧೇಶ್ವರ ಶ್ರೀಗಳ ಜ್ಞಾನಸುಧೆ ನಾಡಿನ ಉದ್ದಗಲದಲ್ಲಿ ಮನೆ, ಮನಗಳಲ್ಲಿ ಸದಾಕಾಲ ರಾರಾಜಿಸುತ್ತದೆ. ಆಧ್ಯಾತ್ಮ ಪ್ರವಚನದ ಮೂಲಕ ಕೋಟ್ಯಂತರ ಹೃದಯಗಳನ್ನು ಬೆಸೆಯುವ, ಜನರ ಮನಸ್ಸನ್ನು ಅರಳಿಸುವ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಶ್ರೀಗಳ ಸರಳತೆ, ಸಹೃದಯತೆ, ನೀತಿ ಯಾರಿಗೂ ಹೋಲಿಕೆ ಮಾಡಲಾಗದ ಮಹೋನ್ನತ ವ್ಯಕ್ತಿತ್ವ. ಜಗತ್ತಿಗೆ ಮಾರ್ಗದರ್ಶನ ಮಾಡಿದ ಅವರ ಸಮುದ್ರದಷ್ಟು ಆಳವಾದ ಜ್ಞಾನ, ಹಿಮಾಯಲದಷ್ಟೇ ನಿಶ್ಚಲವಾದ ವ್ಯಕ್ತಿತ್ವ ಹೊಂದಿದ್ದರು.

ಅವರ ದರ್ಶನ ಭಾಗ್ಯ ನಮ್ಮ ಜೀವನದ ಪುಣ್ಯ. ಅವರು ನಡೆದಾಡುವ, ನುಡಿದಾಡುವ ದೇವರಾಗಿದ್ದರು. ಅವರ ಅಗಲಿಗೆ ತುಂಬಲಾರದ ನಷ್ಟವಾಗಿದೆ ಎಂದರು.

ಸಾಧ್ಯವಾದರೆ ಶ್ರೀಗಳ ಚಿತಾಭಸ್ಮ ವಿಸರ್ಜನಾ ಕಾರ್ಯಕ್ರಮದಲ್ಲೂ ಭಾಗವಹಿಸಲು ಪ್ರಯತ್ನಿಸುವುದಾಗಿ ಶ್ರೀಗಳು ಹೇಳಿದರು.

ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಹಾಗೂ ಆಶ್ರಮದ ಶಿಷ್ಯರು ಇದ್ದರು.

ಋಷಿಸದೃಶ್ಯ ವ್ಯಕ್ತಿತ್ವ: ಹೊರಟ್ಟಿ
ವಿಜಯಪುರ:
ಸಿದ್ದೇಶ್ವರ ಶ್ರೀಗಳು ಯಾವ ಲೌಕಿಕ ವಿಶೇಷಣಗಳಿಗೂ ನಿಲುಕುವಂತವರಲ್ಲ. ನಿಜವಾದ ಅರ್ಥದಲ್ಲಿ ಅವರೊಬ್ಬ ಅವಧೂತರು, ಋಷಿಸದೃಶ್ಯ ವ್ಯಕ್ತಿತ್ವ ಹೊಂದಿದ್ದ ಜ್ಞಾನನಿಧಿಯಾಗಿದ್ದರು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಶ್ರೀಗಳ ಅಗಲಿಗೆ ನುಡಿನಮನ ಸಲ್ಲಿಸಿರುವ ಅವರು, ನಡೆ, ನುಡಿಯಲ್ಲಿ ಒಂದಾಗಿದ್ದರು.

ಗುಮ್ಮಟಗಳ ನಗರಿಯ ಬಹು ದೊಡ್ಡ ‘ಜ್ಞಾನಗುಮ್ಮಟ’ ಅವರಾಗಿದ್ದರು. ಬಯಲಲ್ಲಿ ಬಯಲಾಗಿ ಹೋಗಿರುವ ಸಿದ್ಧೇಶ್ವರ ಸ್ವಾಮಿಗಳು ಸಾರಿದ ಸಾರ್ವಕಾಲಿಕ ಮೌಲ್ಯಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT