ಗುರುವಾರ , ಮೇ 13, 2021
34 °C
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಪ್ರತಿಮೆಗೆ ಮಾಲಾರ್ಪಣೆ

ಶೋಷಿತ ವರ್ಗಗಳಿಗೆ ನ್ಯಾಯ ಒದಗಿಸಿದ ಅಂಬೇಡ್ಕರ್: ಸುನೀಲ್‌ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮಾನವಕುಲಕ್ಕೆ ಹಾಗೂ ಶೋಷಿತ ವರ್ಗಗಳಿಗೆ ನ್ಯಾಯ ಒದಗಿಸಿದ್ದು, ಮುಂದಿನ ಪೀಳಿಗೆಗೆ ಅವರ ವಿಚಾರ ಧಾರೆಗಳು ತಿಳಿಹೇಳುವ ಕಾರ್ಯ ನಡೆಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಸಂವಿಧಾನದ ಮೂಲಕ ಮಾನವ ಕುಲಕ್ಕೆ, ಮಹಿಳಾ ಸಮಾನತೆಗೆ ಹಾಗೂ ಶೋಷಿತ ವರ್ಗಗಳಿಗೆ ಅಂಬೇಡ್ಕರ್ ನ್ಯಾಯ ಒದಗಿಸಿದ್ದಾರೆ. ಅವರ ತತ್ವ, ಆದರ್ಶಗಳು ನಮಗೆಲ್ಲರಿಗೂ ದಾರಿದೀಪವಾಗಿವೆ ಎಂದರು.

ಕಾರ್ಮಿಕ, ಶೋಷಿತ ವರ್ಗ ಸೇರಿದಂತೆ ಪ್ರತಿಯೊಂದು ಸಮುದಾಯಗಳಿಗೆ ನ್ಯಾಯ ದೊರಕಿಸುವ ಜೊತೆಗೆ ಸಮಾನತೆಯನ್ನು ಅಂಬೇಡ್ಕರ್‌ ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್ ಅವರ ಕುರಿತು ಹಾಡನ್ನು ಹಾಡುವ ಮೂಲಕ ಬಸಮ್ಮ ನಡುವಿನಮನಿ ಹಾಗೂ ಪೀರಪ್ಪ ನಡುವಿನಮನಿ ಅವರು ಎಲ್ಲರ ಗಮನಸೆಳೆದರು. ಬೌದ್ಧಧರ್ಮದ ಪ್ರಾರ್ಥನೆ, ಪಠಣ ಮಾಡುವ ಮೂಲಕ ಅಂಬೇಡ್ಕರ್ ಅವರಿಗೆ ಸ್ಮರಿಸಿ, ಗೌರವ ಅರ್ಪಿಸಲಾಯಿತು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕಳಸದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀರಾಮ ಅರಸಿದ್ಧಿ, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ, ಕ್ರೀಡಾಧಿಕಾರಿ ಎಸ್.ಜಿ. ಲೋಣಿ, ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಪ್ರವಾಸೋದ್ಯಮ ಇಲಾಖೆ  ನಿವೃತ್ತ ಉಪನಿರ್ದೇಶಕ ಕ್ಯಾತನ್, ಮುಖಂಡರಾದ ಅಡಿವೆಪ್ಪ ಸಾಲಗಲ್, ಅಭಿಷೇಕ್ ಚಕ್ರವರ್ತಿ, ಜಿತೇಂದ್ರ ಕಾಂಬಳೆ, ಸೋಮನಗೌಡ ಕಲ್ಲೂರು, ಸಿದ್ದು ರಾಯಣ್ಣವರ, ನಾಗರಾಜ ಲಂಬು, ಬಿ.ಎಚ್.ನಾಡಗಿರಿ, ಬಸವಂತ ಗುಣದಾಳ, ಅಮರಪ್ಪ ಚಲವಾದಿ, ವಿಜಯ್ ಕುಮಾರ್ ಸೂರ್ಯವಂಶಿ, ನಿಜಪ್ಪ ಮೇಲಿನಕೇರಿ, ಆರ್.ಬಿ. ಬಡಿಗೇರ್, ಭೀಮರಾಯ ಜಿಗಜಿಣಗಿ ಉಪಸ್ಥಿತರಿದ್ದರು.

‘ಬಾಬಾ ಸಾಹೇಬರ ವಿಚಾರಧಾರೆ ಎಲ್ಲರಿಗೂ ದಾರಿದೀಪ’
ವಿಜಯಪುರ:
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಸದ ರಮೇಶ ಜಿಗಜಿಣಗಿ ಅವರು, ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಅಂಬೇಡ್ಕರ್‌ ಸಂವಿಧಾನದ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆಗಳು, ಅವರ ವಿಚಾರಧಾರೆಗಳು ಎಲ್ಲರಿಗೂ ದಾರಿದೀಪಗಳಾಗಿದ್ದು, ಸಮಾಜದ ಪ್ರತಿಯೊಬ್ಬರೂ ಅವರ ತತ್ವ, ಆದರ್ಶಗಳನ್ನು ಅರ್ಥಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಮೇಶ ಜಿಗಜಿಣಗಿ ಹೇಳಿದರು.

ದೇಶದ ಪ್ರತಿ ಸಮುದಾಯಕ್ಕೆ ಮತ್ತು ದೇಶದ ಉನ್ನತಿಗಾಗಿ ಸಂವಿಧಾನದ ಮೂಲಕ ಅಂಬೇಡ್ಕರ್‌ ಮಾರ್ಗದರ್ಶನ ನೀಡಿದ್ದಾರೆ ಎಂದರು

ದಲಿತ ವಿದ್ಯಾರ್ಥಿ ಪರಿಷತ್ತಿನಿಂದ ವಿದ್ಯಾರ್ಥಿಗಳಿಗಾಗಿ ನೀಡಿದ ಧನಸಹಾಯ ಚೆಕ್‌ ಅನ್ನು ಐವರು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು