ನಾಲತವಾಡ: ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಪಟ್ಟಣದಲ್ಲಿ ₹20 ಕೋಟಿಗಳ ಅನುದಾನದಲ್ಲಿ ಕೈಗೊಂಡಿರುವ ಅಮೃತ್ 2.0 ಯೋಜನೆಯ ಟೆಂಡರ್ ಅನ್ನು ಆಂಧ್ರ ಮೂಲದವರು ಪಡೆದಿದ್ದು, ಶಾಸಕ ಸಿ.ಎಸ್.ನಾಡಗೌಡರ ದೂರದ ಸಂಬಂಧಿಗಳು ಸಹಭಾಗಿತ್ವ ಪಡೆದುಕೊಂಡಿದ್ದು, ಶಾಸಕರ ಆಪ್ತರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ’ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆರೋಪಿಸಿದರು.

ಪಟ್ಟಣದ ರಘುವೀರ ಚಿತ್ರಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ ಅಪ್ಪಾಜಿ ನಾಡಗೌಡ ಅವರ ಸ್ವಂತ ಊರಿದು, ಕಳಪೆ ಕಾಮಗಾರಿ ಮಾಡಿ ಶಾಸಕರ ಸಂಬಂಧಿಗಳು ಅನುದಾನ ಲೂಟಿ ಹೊಡೆಯುತ್ತಿದ್ದಾರೆ ಎಂದರು.

ಪಟ್ಟಣದ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿದ ನಡಹಳ್ಳಿ, ‘ಸಿ.ಸಿ ರಸ್ತೆ ಅಗೆದು, ರಸ್ತೆ ಹಾಳುಮಾಡಿ ಅಮೃತ್ ಯೋಜನೆ ಕಾಮಗಾರಿ ಮಾಡುತ್ತಿದ್ದಾರೆ. ಪಟ್ಟಣದ ಜನತೆ ಗಮನಿಸಿ, ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ರಸ್ತೆ ಮೇಲೆ ಪೈಪ್ಲೈನ್ ಅಳವಡಿಸಿ. ರಸ್ತೆ ಅಡಿಯಲ್ಲಿಯ ಪೈಪ್ಲೈನ್ ಗೆ ಚರಂಡಿ ನೀರು ಸೇರುವ ಸಾಧ್ಯತೆ ಇದೆ. ಸಾರ್ವಜನಿಕರು ಗುಣಮಟ್ಟದ ಕೆಲಸ ತೆಗೆದುಕೊಳ್ಳಬೇಕು’ ಎಂದರು.

‘ಅಮೃತ್ ಯೋಜನೆಗಾಗಿ ಸಿ.ಸಿ ರಸ್ತೆ ಒಡೆಯುವುದಕ್ಕೆ ನಮ್ಮ ವಿರೋಧವಿದೆ. ಆದರೆ, ಕೆಲಸ ಮಾಡಿಸಲು ನಮ್ಮ ತಕರಾರಿಲ್ಲ. ರಸ್ತೆ ಪಕ್ಕದಲ್ಲಿ ಪೈಪ್ಲೈನ್ ಮಾಡಬೇಕು. ಆದರೆ, ರೈತರು ಹೊಲಗಳಲ್ಲಿ ಬಳಸುವ ಪಿವಿಸಿ ಪೈಪ್ ಹಾಕಿ ಕಳಪೆ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ದುಡ್ಡು ಕೊಟ್ಟು ಕುಡಿಯುವ ನೀರಿಗೆ ಭವಿಷ್ಯದಲ್ಲಿ ಚರಂಡಿ ನೀರು ಸೇರಿ ಜನರು ಆರೋಗ್ಯ ಸಮಸ್ಯೆಗೆ ಒಳಗಾಗಬೇಕಾಗುತ್ತದೆ’ ಎಂದು ಹೇಳಿದರು.

ಆರು ಬಾರಿ ಶಾಸಕರಾದ ಅಪ್ಪಾಜಿ ನಾಡಗೌಡರು ಮೊದಲು ಪಟ್ಟಣದ ಎಲ್ಲಾ ಓಣಿ ವಾರ್ಡ್ ಗಳಿಗೆ ಭೇಟಿ ನೀಡಿ ಸಮಸ್ಯೆ ಅರಿಯಿರಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದ 50:50 ಅನುಪಾತದಲ್ಲಿ ಅಮೃತ್ ಯೋಜನೆ ಅನುಷ್ಠಾನವಾಗುತ್ತಿದೆ. ಈ ನೀರಿನ ಯೋಜನೆ ನಾನು ತಂದಿರುವುದು ಎಂದು ಹೇಳಿದರು.

ಪಕ್ಷದ ನಾಯಕರಾದ ಎಂ.ಎಸ್.ಪಾಟೀಲ, ಕೆ.ಆರ್.ಬಿರಾದಾರ, ರೇವಣಿಪ್ಪ ಹಾವರಗಿ, ಮುತ್ತು ಅಂಗಡಿ, ಸಂಗಣ್ಣ ಕುಳಗೇರಿ, ವೀರೇಶ ರಕ್ಕಸಗಿ, ವೀರೇಶ ಚಲವಾದಿ, ಪಾವಡಬಸು ದೇಶಮುಖ, ಬಸವರಾಜ ತಿರುಮುಖೆ, ಮುದುಕಪ್ಪ ಗಂಗನಗೌಡ್ರ, ಸಂಗು ಮೇಟಿ ಇದ್ದರು.

‘ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡಿಲ್ಲ’

ಪಕ್ಷ ಬೇಧ ಮರೆತು ಎಲ್ಲ ಜಾತಿಯ ಬಡವರಿಗಾಗಿ 800 ಮನೆಗಳನ್ನು ನನ್ನ ಅವಧಿಯಲ್ಲಿ ಮಂಜೂರು ಮಾಡಿಸಿರುವೆ. ಇವುಗಳಲ್ಲಿ ಸುಮಾರು 380 ಮನೆಗಳನ್ನು ರದ್ದು ಮಾಡುವುದಾಗಿ ಮುಖ್ಯಾಧಿಕಾರಿಗಳು ಹೇಳುತ್ತಾರಂತೆ, ಅವುಗಳನ್ನು ರದ್ದು ಮಾಡುವ ಅಧಿಕಾರ ಯಾರಿಗೂ ಇಲ್ಲ. ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ನಾನು ರಾಜಕಾರಣ ಮಾಡಿಲ್ಲ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಮುದ್ದೇಬಿಹಾಳ ಹಾಗೂ ನಾರಾಯಣಪುರ ರಸ್ತೆಯಲ್ಲಿ ಡಿವೈಡರ್ಗಳಲ್ಲಿ ಅಳವಡಿಸಿದ ತುಕ್ಕು ಹಿಡಿದ ಗ್ರಿಲ್ ಕಳಪೆಮಟ್ಟದ್ದಾಗಿದೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.