ವಿಜಯಪುರ: ನಗರ ಪ್ರದೇಶದ ಆಶಾ ಕಾರ್ಯಕರ್ತೆಯರಿಗೆ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ರೂ 5 ಸಾವಿರ ಮೊತ್ತದ ಉಚಿತ ಸ್ಮಾರ್ಟ್‌ಕಾರ್ಡ್ ಅನ್ನು ನೀಡುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಘೋಷಿಸಿದ್ದಾರೆ.

ಕೋವಿಡ್ ಎರಡನೇ ಅಲೆಯಲ್ಲಿ ಜನರ ಪ್ರಾಣ ಉಳಿಸಲು ತಮ್ಮ ಜೀವದ ಭಯ ತೊರೆದು ನಗರ ಪ್ರದೇಶದಲ್ಲಿ ಚಿಕಿತ್ಸೆ, ಲಸಿಕೆ ನೀಡುತ್ತಿರುವ 53 ಆಶಾ ಕಾರ್ಯಕರ್ತೆಯರು ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ 92 ಜನ ನರ್ಸ್ ಹಾಗೂ ವಾಹನ ಚಾಲಕರು ಸೇರಿದಂತೆ ಒಟ್ಟು 145 ಸಿಬ್ಬಂದಿಗೆ ಉತ್ತೇಜನ ನೀಡುವ ಸಲುವಾಗಿಸ್ಮಾರ್ಟ್‌ಕಾರ್ಡ್ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ರೂ 5 ಸಾವಿರ ಮೊತ್ತದ ಈ ಸ್ಮಾರ್ಟ್ ಕಾರ್ಡ್ ಬಳಸಿ, ಶ್ರೀ ಸಿದ್ಧೇಶ್ವರ ಸೂಪರ್ ಬಜಾರ್ ಅಥವಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಸ್ ಹೈಪರ್ ಮಾರ್ಟ್(ಶಾಸಕರ ಮಾಲೀಕತ್ವ)ನಲ್ಲಿ ಏನನ್ನಾದರೂ ಖರೀದಿಸಬಹುದಾಗಿದೆ ಎಂದು ಹೇಳಿದ್ದಾರೆ.

ಈ ಸ್ಮಾರ್ಟ್‌ಕಾರ್ಡ್ ಅನ್ನು ಶೀಘ್ರವೇ ಅವರವರ ಹೆಸರಿಗೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.