ವಿಜಯಪುರ: ‘ರಾಷ್ಟ್ರದ ಉನ್ನತಿಗಾಗಿ ಜೀವನವನ್ನೇ ಸಮರ್ಪಿಸಿದ ಮಹಾನ್ ನಾಯಕ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ’ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು.

ನಗರದ ಅಟಲ್ ಬಿಹಾರಿ ವಾಜಪೇಯಿ ವೃತ್ತದಲ್ಲಿ ಬುಧವಾರ ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನೋತ್ಸವದ ಅಂಗವಾಗಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.

‘ವಾಜಪೇಯಿ ಅವರು ರಾಷ್ಟ್ರ ಕಂಡ ಅಪ್ರತಿಮ ವಾಕ್ಪಟು. ಅಜಾತಶತ್ರು. ದೇಶದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಬದಲಾವಣೆ ತಂದಿರುವ ಅವರು, ಅಭಿವೃದ್ಧಿಯ ಮೂಲಕ ದೇಶದ ಚಿತ್ರಣವನ್ನೇ ಬದಲಿಸಿದ್ದಾರೆ. ಬಿಜೆಪಿಗೆ ಹಾಗೂ ದೇಶ ಭಕ್ತರಿಗೆ ಬಹಳ ಅಭಿಮಾನ ಪಡುವ ಹೆಮ್ಮೆಯ ದಿವಸ ಅಟಲ್ ಜಿ ಅವರ ಜನ್ಮ ದಿನ’ ಎಂದರು.

ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಎಂ.ಎಸ್. ಕರಡಿ, ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟ, ರಾಜಶೇಖರ ಕುರಿಯವರ, ವಿಠ್ಠಲ ಹೊಸಪೇಟ, ಮಲ್ಲಿಕಾರ್ಜುನ ಗಡಗಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಸದಾಶಿವ ಗುಡ್ಡೋಡಗಿ, ರಾಜೇಶ ದೇವಗಿರಿ, ಮಲಕಪ್ಪ ಗಾಣಿಗೇರ, ಅಶೋಕ ಬೆಲ್ಲದ, ಮಡಿವಾಳ ಯಾಳವಾರ, ಸಂತೋಷ ಪಾಟೀಲ, ಚಂದ್ರು ಚೌದರಿ, ದತ್ತಾ ಗೊಲಾಂಡೆ, ಬಸವರಾಜ ಗೊಳಸಂಗಿ, ಸಂತೋಷ ತಳಕೇರಿ, ಪ್ರಕಾಶ ಚವ್ಹಾಣ, ರಾಜಲಕ್ಷ್ಮೀ ಪರ್ವತ್ತನವರ, ಶಕುಂತಲಾ ಕುರ್ಲೆ, ಭಾರತಿ ಶಿವಣಗಿ, ಬಸವರಾಜ ಲವಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.