ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗರ್‌ ಹುಕುಂ ಸಾಗುವಳಿದಾರರ ಪ್ರತಿಭಟನೆ

Last Updated 24 ಮಾರ್ಚ್ 2023, 11:10 IST
ಅಕ್ಷರ ಗಾತ್ರ

ವಿಜಯಪುರ: ಬಗರ್‌ ಹುಕುಂ ಸಾಗುವಳಿದಾರರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ರಾಜ್ಯ ಸರ್ಕಾರ ಬಗರ್‌ ಹುಕುಂ ಸಾಗುವಳಿದಾರರಿಗೆ ಫಾರಂ ನಂ. 57 ತುಂಬಲು 2018 ರಿಂದ ಆದೇಶ ಮಾಡಿದರು. ಆ ಪ್ರಕಾರ ವಿಜಯಪುರ - ಬಬಲೇಶ್ವರ, ಇಂಡಿ, ನಿಡಗುಂದಿ, ತಿಕೋಟಾ ತಾಲ್ಲೂಕುಗಳಲ್ಲಿ ಬಗರ್‌ ಹುಕುಂ ಸಾಗುವಳಿದಾರರು ದಾಖಲೆಗಳನ್ನು ಹಚ್ಚಿ ಹಲವಾರು ಅರ್ಜಿಗಳನ್ನು ಕೊಟ್ಟಿದ್ದಾರೆ. ಆದರೆ, ಸರ್ಕಾರ ಇದುವರೆಗೂ ಹಕ್ಕು ಪತ್ರ ಕೊಟ್ಟಿಲ್ಲ ಎಂದು ಆರೋಪಿಸಿದರು.

ಶಾಸಕರ ಅಧ್ಯಕ್ಷತೆಯಲ್ಲಿ ಕಮಿಟಿ ರಚನೆ ಮಾಡಿಲ್ಲ. ತಕ್ಷಣ ಅಕ್ರಮ ಸಕ್ರಮ ಕಮಿಟಿ ರಚನೆ ಮಾಡಬೇಕು. ಬಗರ್‌ ಹುಕ್ಕುಂ ಹಕ್ಕು ಪತ್ರ ಕೊಡಬೇಕು ಎಂದು ಆಗ್ರಹಿಸಿದರು.

ಬಬಲೇಶ್ವರ ತಾಲ್ಲೂಕಿನ ಶಿರಟುರ, ಹೊಸುರ, ಬಗಿ, ಚಿಕ್ಕಗಲಗಲ್ಲಿ, ಕಣಬೂರೆ ಗ್ರಾಮಗಳ ಸರ್ಕಾರದ ಭೂಮಿಯನ್ನು ರೈತರು ಸುಮಾರು ವರ್ಷದಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಫಾರಂ ನಂ. 57 ತುಂಬಿದ್ದಾರೆ. ಇವರ ಕಡೆ ಸಾಗುವಳಿ ಮಾಡುವ ದಾಖಲೆಗಳು, ನಕಾಶೆಗಳ ಹಾಗೂ ಸುಪ್ರೀಂ ಕೋರ್ಟ್ ಆದೇಶ ಇದೆ ಎಂದು ಹೇಳಿದರು.

ರೈತರಾದ ಪರಸಪ್ಪ ಮಂಟೂರ, ಸುರೇಖಾ ರಜಪೂತ, ಹಣಮಂತ ಶಿರಬೂರ, ದಾದರಸಾಬ ಜೈನಾಪೂರ, ಲಾಲಸಾಬ ಮ್ಯಾಗೇರಿ, ಸೊಮಪ್ಪ ಗುಡಿಮನಿ, ಭೀಮಪ್ಪ ಮಾದರ, ಸೋಮನಿಂಗ ತಳಕಡೆ, ಚಂದಪ್ಪ ತಡಲಗಿ, ಸುರೇಶ ತಳಕೇರಿ, ಮಾಳಪ್ಪ ನಡುವಿನಮನಿ ಜುಬೇದಾ ಹಣಗಿ, ರಾಜು ರಣದೇವಿ ಹುಸೇನಸಾಬ ದೊಡಮನಿ ವಿಠ್ಠಲ ಚಲವಾದಿ ಸಿದ್ದಪ್ಪ ಹುಲಿಜಂತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT