ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗದಲ್ಲಿ ಪೂಜ್ಯ ತಂದೆಯವರು ಇದ್ದಾರೆ, ನನ್ನದೇನು ಕೆಲಸ: ಯತ್ನಾಳ

Published 14 ಏಪ್ರಿಲ್ 2024, 12:37 IST
Last Updated 14 ಏಪ್ರಿಲ್ 2024, 12:37 IST
ಅಕ್ಷರ ಗಾತ್ರ

ವಿಜಯಪುರ: ‘ಶಿವಮೊಗ್ಗದಲ್ಲಿ ತಾಯಿ ಹೃದಯದ ಪೂಜ್ಯ ತಂದೆಯವರು ಇದ್ದಾರೆ, ತಾಯಿ ಹೃದಯದ ಪೂಜ್ಯ ತಂದೆಯವರ ಸಣ್ಣ ಮಗ ರಾಜ್ಯಾಧ್ಯಕ್ಷರಿದ್ಧಾರೆ, ತಾಯಿ ಹೃದಯದ ಪೂಜ್ಯ ತಂದೆಯವರ ಹಿರಿಯ ಮಗ ಇದ್ದಾರೆ. ಅವರೇ ಮೂರು ಜನ ದೊಡ್ಡ ದೊಡ್ಡ ನಾಯಕರಿರುವಾಗ ಅಲ್ಲಿ ನನ್ನದೇನು ಕೆಲಸ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಯಡಿಯೂರಪ್ಪ ಕುಟುಂಬದ ವಿರುದ್ಧ ಅಸಮದಾನ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಯ ಬಿಜೆಪಿ ಸ್ಟಾರ್ ಪ್ರಚಾರಕರಾಗಿರುವ ಯತ್ನಾಳ ಶಿವಮೊಗ್ಗದಲ್ಲಿ ಪ್ರಚಾರ ಮಾಡುತ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ನಗರದಲ್ಲಿ ಭಾನುವಾರ ಪ್ರತಿಕ್ರಿಯಿಸಿದರು.

‘ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ರಹಸ್ಯಗಳನ್ನು ಬಿಚ್ಚಿಡುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ, ಎಲ್ಲರದ್ದೂ ರಹಸ್ಯ ಇದ್ದೇ ಇರುತ್ತದೆ. ಅಂಥ ಹಲ್ಕಾ ಮಾತಾಡುವವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT