ಮಂಗಳವಾರ, ನವೆಂಬರ್ 24, 2020
26 °C

ರೋಲ್‌ಕಾಲ್‌ ಹೋರಾಟಗಾರರಿಗೆ ಅಂಜುವ ಅಗತ್ಯವಿಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಮರಾಠಾ ಸಮಾಜ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ರೋಲ್‌ಕಾಲ್‌ ಹೋರಾಟಗಾರರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಮುಖ್ಯಮಂತ್ರಿಗಳು ಹೆದರಬೇಕಿಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಇದನ್ನು ಓದಿ: ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕನ್ನಡಿಗರ ಮತಗಳು ಹೋಗುತ್ತವೆ ಎಂಬ ಭಯ ಬೇಡ. ಮುಖ್ಯಮಂತ್ರಿ ಅವರು ಮರಾಠಾ ಸಮಾಜದ ಅಭಿವೃದ್ಧಿ ಪ್ರಾಧಿಕಾರ ಹಿಂತೆಗೆದುಕೊಂಡರೆ ದೊಡ್ಡ ಅನಾಹುತವಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

‘ಕನ್ನಡದ ಹೆಸರಲ್ಲಿ ವಾಟಾಳ್‌ ನಾಗರಾಜ್‌, ಕರವೇ ಅಧ್ಯಕ್ಷ ಸರ್ಕಾರದಿಂದ ₹ 50 ಲಕ್ಷ, ₹ 60 ಲಕ್ಷ ಅನುದಾನ ಏತಕ್ಕೆ ಪಡೆದುಕೊಂಡಿದ್ದಾರೆ? ಇವರಿಂದ ನಾವು ಕಲಿಯಬೇಕಾಗಿರುವುದು ಏನೂ ಇಲ್ಲ’ ಎಂದರು.

ಇದನ್ನೂ ಓದಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ‌ಗೆ ಕರವೇ ನಾರಾಯಣಗೌಡರ ಎರಡು ಸವಾಲು

‘ಮರಾಠಾ ಸಮಾಜ ಹಿಂದೂ ಧರ್ಮದ ಉಳಿವಿಗಾಗಿ, ದೇಶಕ್ಕಾಗಿ ಹೋರಾಟ ನಡೆಸಿರುವ ಕ್ಷತ್ರಿಯ ಸಮಾಜವಾಗಿದೆ. ಕಾನೂನಾತ್ಮಕವಾಗಿ ಪ್ರಾಧಿಕಾರಕ್ಕೆ ಇನ್ನೂ ಹೆಚ್ಚಿನ ಸವಲತ್ತು ನೀಡಬೇಕು’ ಎಂದು ಮುಖ್ಯಮಂತ್ರಿಗೆ ಆಗ್ರಹಿಸಿದರು. ಹಿಂದೂ ಸಮಾಜ ಉಳಿಯಲು ಶಿವಾಜಿ ಮಹಾರಾಜ ಕಾರಣರಾಗಿದ್ದಾರೆ ಎಂದು ಹೇಳಿದರು. ಬೆಳಗಾವಿ ವಿಷಯದಲ್ಲಿ ಶಿವಸೇನೆ, ಅಜಿತ್‌ ಪವಾರ್‌ ಹೇಳಿಕೆಗೆ ಯಾವತ್ತೂ ನಮ್ಮ ವಿರೋಧವಿದೆ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು