ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವಕ್ಕೆ ಬಸವಣ್ಣವರ ಕೊಡುಗೆ ಅಪಾರ’

Published 10 ಮೇ 2024, 15:48 IST
Last Updated 10 ಮೇ 2024, 15:48 IST
ಅಕ್ಷರ ಗಾತ್ರ

ಹೊರ್ತಿ: ‘ವಿಶ್ವಕ್ಕೆ ಮಹಾನ್ ಮಾನವತಾವಾದಿ, ಸಮಾನತೆಯ ಹರಿಕಾರ, ಭಕ್ತಿ ಭಂಡಾರಿ ಬಸವೇಶ್ವರರ ಕೊಡುಗೆ ಅಪಾರ’ ಎಂದು ಜಿಗಜೇವಣಿ ಗ್ರಾಮದ ಹಿರಿಯ ಮುಖಂಡ ಶಾಂತುಗೌಡ ರಾ. ಬಿರಾದಾರ ಹೇಳಿದರು.

ಸಮೀಪದ ಜಿಗಜೇವಣಿ ಗ್ರಾಮದ ಬಸವ ವೃತ್ತದಲ್ಲಿ ಶುಕ್ರವಾರ ಬಸವ ಜಯಂತಿ ಆಚರಣೆ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಬಸವಣ್ಣನವರ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಜ್ಞಾನದ ದೀವಿಗೆ ಹಚ್ಚಿ’ ಎಂದರು.

ಜಿಗಜೇವಣಿ ಗ್ರಾಮದ ಹಿರಿಯ ಮುಖಂಡ ಶಾಂತುಗೌಡ ರಾ. ಬಿರಾದಾರ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಶ್ರಿಮಂತ ಕಾ.ಬಿರಾದಾರ, ನಿಂಗಪ್ಪ ಬಿ. ಗುಡ್ಡದ, ಗುರಪ್ಪ ತು.ಝಳಕಿ, ಕಾಂತಪ್ಪ ರಂ.ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT