ಮುದ್ದೇಬಿಹಾಳ: ತಾಲ್ಲೂಕಿನ ಜಟ್ಟಗಿಯಲ್ಲಿ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಬೆಳ್ಳೇಶ್ವರ ದೇವರ ಜಾತ್ರೆಯಲ್ಲಿ ಕರಿಗಡುಬಿನ ಪ್ರಸಾದವೇ ವಿಶೇಷ.

ಜಟ್ಟಗಿ ಗ್ರಾಮದಲ್ಲಿ ಪ್ರತಿ ವರ್ಷಕ್ಕೊಮ್ಮೆ ಬೆಳ್ಳೇಶ್ವರ ಜಾತ್ರೆ ನಡೆಸಲಾಗುತ್ತಿದೆ. ಈ ಜಾತ್ರೆಯಲ್ಲಿ ಜಟ್ಟಗಿ, ಹುಲ್ಲೂರು, ಹುಲ್ಲೂರು ತಾಂಡಾ, ಗೆದ್ದಲಮರಿ, ಚಲಮಿ, ಹರಿಂದ್ರಾಳ, ಮಾದಿನಾಳ ಹಾಗೂ ಸುತ್ತಲಿರುವ ತಾಂಡಾಗಳ ಜನರು ಆಗಮಿಸಿ ತಮ್ಮ ಭಕ್ತಿ ಸಮರ್ಪಣೆ ಮಾಡುತ್ತಾರೆ.

ಐದು ಕ್ವಿಂಟಾಲ್ ಕರಿಗಡುಬು:

ಜಾತ್ರೆಯ ಅಂಗವಾಗಿ ವಿಶೇಷ ಪ್ರಸಾದದ ರೂಪದಲ್ಲಿ ಕರಿಗಡುಬು ಸಿದ್ಧಪಡಿಸಲಾಗುತ್ತದೆ. ಐದು ಕ್ವಿಂಟಾಲ್ ಕರಿಗಡುಬು ಮಾಡಲಾಗುತ್ತದೆ. ಈ ಪ್ರಸಾದ ತಯಾರಿಕೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನರು ಬಂದು ತಮ್ಮ ಸೇವೆ ಮಾಡುತ್ತಾರೆ.

ಗ್ರಾಮದವರಷ್ಟೇ ದೇಣಿಗೆ: ಬಹುತೇಕ ಬೇರೆ ಊರಿನ ಜಾತ್ರೆ ಕಾರ್ಯಕ್ರಮಗಳಿಗೆ ಮತ್ತೊಂದು ಊರಿಗೆ ಹೋಗಿ, ಗಣ್ಯರನ್ನು ಸಂಪರ್ಕಿಸಿ ದೇಣಿಗೆ ಸಂಗ್ರಹಿಸುವುದು ವಾಡಿಕೆ. ಆದರೆ, ಜಟ್ಟಗಿ ಬೆಳ್ಳೇಶ್ವರ ಜಾತ್ರಾ ಕಮಿಟಿಯವರು ಗ್ರಾಮಸ್ಥರಿಂದಲೇ ಮನೆ ಮನೆಗೂ ದೇಣಿಗೆ ಸಂಗ್ರಹಿಸಿ ಜಾತ್ರೆ ಮಾಡಿಕೊಂಡು ಬಂದಿದ್ದಾರೆ. ಬೇರೆ ಯಾವುದೇ ಊರಿನವರಿಗಾಗಲೀ, ರಾಜಕೀಯ ಗಣ್ಯರಿಗಾಗಲಿ, ಕಮೀಟಿಯವರು ದೇಣಿಗೆ ಕೊಡಿ ಎಂದು ಕೇಳಿರುವ ಉದಾಹರಣೆಗಳಿಲ್ಲ ಎಂದು ಸಮಾಜ ಸೇವಕ ಎಂ.ಎನ್.ಮದರಿ ಹೇಳಿದರು.

ಕರಿಗಡುಬು ನೈವೇದ್ಯ:

ಜಾತ್ರೆಯ ಸಮಯದಲ್ಲಿ ವಿಜಯಪುರದಿಂದ ಪೂಜೆಗೆ ನೀರು ತಂದು ಅಭಿಷೇಕ ಮಾಡಲಾಗುತ್ತದೆ. ನಮ್ಮ ಗ್ರಾಮದವರಿಂದಲೇ ಪಟ್ಟಿ ಸಂಗ್ರಹಿಸಿ ಜಾತ್ರೆ ಮಾಡಿಕೊಂಡು ಬಂದಿದ್ದೇವೆ. ಕಳೆದ 20 ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಕರಿಗಡುಬು ಪ್ರಸಾದ ಒಮ್ಮೆ ಮಾಡದೇ ಇದ್ದ ಸಂದರ್ಭದಲ್ಲಿ ಊರಿನಲ್ಲಿ ಬರ ಆವರಿಸಿ ಜನರಿಗೆಲ್ಲ ತೊಂದರೆ ಉಂಟಾಗಿತ್ತು. ಕರಿಗಡುಬು ಮಾಡಿ ಬೆಳ್ಳೇಶ್ವರನಿಗೆ ಪ್ರಸಾದ ಮಾಡಿದಾಗ ಮಳೆ ಸುರಿದು ಈ ಭಾಗದಲ್ಲಿ ಸಮೃದ್ಧಿ ನೆಲೆಸಿತು ಎಂಬುದು ನಮ್ಮ ಹಿರಿಯರು ಹೇಳುವ ಮಾತುಗಳಾಗಿದ್ದು, ಅದೇ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೊರಟಿದ್ದೇವೆ ಎಂದು ಬೆಳ್ಳೇಶ್ವರ ಜಾತ್ರಾ ಕಮೀಟಿ ಅಧ್ಯಕ್ಷ ಬಿ.ಕೆ.ಬಿರಾದಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.