ವಿಜಯಪುರ: ಮೇ ಸಾಹಿತ್ಯ ಮೇಳ ಬಳಗದ ಆಶ್ರಯದಲ್ಲಿ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಒಂದು ವಾರದ ‘ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಪುಸ್ತಕ ಮೇಳ’ವನ್ನು ಏಪ್ರಿಲ್ನಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಮಂಗಳವಾರ ನಡೆದ ಮೇ ಸಾಹಿತ್ಯ ಮೇಳ ಬಳಗ ಮತ್ತು ವಿವಿಧ ದಲಿತ, ಪ್ರಗತಿಪರ ಮತ್ತು ಸಮಾನ ಮನಸ್ಕ ಗೆಳೆಯರ ಸಭೆಯಲ್ಲಿ, ಯುವಕರಲ್ಲಿ ವೈಚಾರಿಕ ಜಾಗೃತಿ ಮೂಡಿಸಲು ಮತ್ತು ಓದಿನ ಹವ್ಯಾಸ ಬೆಳೆಸಲು ಪುಸ್ತಕ ಮೇಳ ಹಮ್ಮಿಕೊಳ್ಳುವುದು ಅತ್ಯಂತ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಅಂಬೇಡ್ಕರ್ ಹಬ್ಬ’ದ ಜೊತೆಗೆ ಪುಸ್ತಕ ಮೇಳ ಹಮ್ಮಿಕೊಳ್ಳಬೇಕು ಮತ್ತು ಕನ್ನಡದ ಪುಸ್ತಕಗಳೊಂದಿಗೆ ಇಂಗ್ಲಿಷ್, ಹಿಂದಿ ಸೇರಿದಂತೆ ಬೇರೆ ಭಾಷೆಗಳ ಪುಸ್ತಕಗಳು ಕೂಡ ಲಭ್ಯವಾಗಬೇಕು ಎಂಬ ಸಲಹೆ ವ್ಯಕ್ತವಾಯಿತು.

ಬುದ್ಧ, ಬಸವಣ್ಣ, ಅಂಬೇಡ್ಕರ್, ಫುಲೆ, ಪೆರಿಯಾರ್, ಕಾನ್ಷಿರಾಂ ಚಿಂತನೆಯ ಮತ್ತು ಎಡ ಮತ್ತು ದಲಿತ, ಮಹಿಳಾಪರ ಸಾಹಿತ್ಯದ ಪುಸ್ತಕಗಳನ್ನು ಮಾತ್ರ ಆಹ್ವಾನಿಸಬೇಕು. ನಿತ್ಯವೂ ಮಹತ್ವದ ಪುಸ್ತಕಗಳ ಓದು ಮತ್ತು ಸಂವಾದ ಹಮ್ಮಿಕೊಳ್ಳಬೇಕು ಎಂದು ಸಭೆಯಲ್ಲಿದ್ದ ಮುಖಂಡರು ತಿಳಿಸಿದರು.

ಸಮಿತಿ ರಚನೆ: ಪುಸ್ತಕ ಮೇಳವನ್ನು ಯಶಸ್ವಿಗೊಳಿಸಲು ಸಂಚಾಲನ ಸಮಿತಿ ರಚಿಸಲಾಯಿತು. ಪ್ರಧಾನ ಸಂಚಾಲಕರು–ಅನಿಲ ಹೊಸಮನಿ, ರಾಜಶೇಖರ ಯಡಹಳ್ಳಿ, ಭಗವಾನ ರೆಡ್ಡಿ, ಸಂಚಾಲಕರು– ಪುಲಕೇಶಿ ಚೌಧರಿ, ಜಿ.ಜಿ. ಗಾಂಧಿ, ಅಡಿವೆಪ್ಪ ಸಾಲಗಲ್ಲ, ನಾಗರಾಜ ಲಂಬು, ಶ್ರೀನಾಥ ಪೂಜಾರಿ,ಬಸವರಾಜ ಹೋಳ್ಕರ, ಸಂಜು ಕಂಬಾಗಿ, ಸುರೇಶ ಜೀಬಿ, ಎಲ್.ಬಿ. ಸಜ್ಜನ, ಪ್ರಭುಗೌಡ ಪಾಟೀಲ, ಲಲಿತಾ ಬಿಜ್ಜರಗಿ, ಸುಭಾಸ ಹೊನ್ನಕಂಟಿ, ಚೆನ್ನು ಕಟ್ಟಿಮನಿ, ಗೌಡಪ್ಪ ಬಡಿಗೇರ, ಮಹಾದೇವ ಬನಸೋಡೆ, ಫಾ.ಕೆವಿನ್, ಓಂಕಾರ ಕಾಕಡೆ ಅವರನ್ನು ನೇಮಕ ಮಾಡಲಾಗಿದೆ.

ಪ್ರತಿ ತಾಲ್ಲೂಕಿನಿಂದ ಐದು ಜನರನ್ನು ಆಯ್ಕೆ ಮಾಡಿಕೊಂಡು ವ್ಯಾಪಕ ಪ್ರಚಾರ ಕೈಗೊಳ್ಳುವ ಅಧಿಕಾರವನ್ನು ಸಂಚಾಲನ ಸಮಿತಿಗೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.