ವಿಜಯಪುರ: ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಆರೋಗ್ಯ ಪೂರ್ಣ ಸ್ಪರ್ಧೆಯ ಮೂಲಕ ಶೈಕ್ಷಣಿಕ ಸಂಸ್ಥೆಗಳನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿಯಾಗಿರುವ ಶಾಸಕಡಾ.ಎಂ.ಬಿ.ಪಾಟೀಲ್ ಹೇಳಿದರು.

ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದ ನೂತನ ಉಪಕುಲಪತಿಯಾಗಿ ಡಾ.ಆರ್.ಎಸ್.ಮುಧೋಳ ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ ಕಾಯಿಲೆ ಎರಡನೇ ಅಲೆ ಸಂದರ್ಭದಲ್ಲಿ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯ ಮಾಡಿದ ಸಾಧನೆ ದೇಶದ ಗಮನ ಸೆಳೆದಿದೆ ಎಂದರು.

ನೂತನ ಉಪಕುಲಪತಿಯಾಗಿ ಪೂರ್ಣಾವಧಿಗೆ ಅಧಿಕಾರ ವಹಿಸಿಕೊಂಡ ಡಾ.ಆರ್.ಎಸ್.ಮುಧೋಳ ಮಾತನಾಡಿ, ಸಂಸ್ಥೆಯ ಹಿರಿಯರು, ಹಿಂದಿನ ಕುಲಪತಿಗಳ ಆಶಯದಂತೆ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯವನ್ನು ಉನ್ನತ ವಿಶ್ವವಿದ್ಯಾಲಯವನ್ನಾಗಿ ರೂಪಿಸಲು ಎಲ್ಲರ ಸಹಕಾರವನ್ನು ಪಡೆದು ಮುನ್ನೆಡೆಯುತ್ತೇನೆ ಎಂದರು.

ಕಾಲಕ್ಕೆ ತಕ್ಕಂತೆ ಅಗತ್ಯ ಬದಲಾವಣೆಗಳನ್ನು ಶೈಕ್ಷಣಿಕ ವ್ಯವಸ್ಥೆಯಲ್ಲಿ ನಾವು ರೂಪಿಸಿಕೊಳ್ಳಬೇಕು. ಜಾಗತಿಕವಾಗಿ ಆರೋಗ್ಯ, ಶೈಕ್ಷಣಿಕ ಕ್ಷೇತ್ರದ ಆಗು-ಹೋಗುಗಳನ್ನು ಗಮನದಲ್ಲಿರಿಸಿ, ಅದಕ್ಕೆ ತಕ್ಕಂತೆ ನಾವು ನೀತಿ ನಿರೂಪಣೆಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಬಿ.ಎಲ್.ಡಿ.ಇ ಪ್ರಧಾನ ಕಾರ್ಯದರ್ಶಿ ಜಿ.ಕೆ.ಪಾಟೀಲ, ಆಡಳಿತಾಧಿಕಾರಿ ಡಾ.ಆರ್.ವಿ.ಕುಲಕರ್ಣಿ, ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ಆಸ್ಪತ್ರೆ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ, ಪ್ರಾಧ್ಯಾಪಕರಾದ ಡಾ.ಕುಶಾಲ ದಾಸ, ಡಾ.ಅರುಣ ಇನಾಮದಾರ, ರಿಜಿಸ್ಟಾರ್ ಡಾ. ಜೆ.ಜಿ.ಅಂಬೇಕರ ಉಪಸ್ಥಿತರಿದ್ದರು.

ಹಿಂದುಳಿದ ಪ್ರದೇಶದಲ್ಲಿರುವ ಬಿಎಲ್‌ಡಿಇವಿಶ್ವವಿದ್ಯಾಲಯ ಮುಂದಿನ ದಿನಗಳಲ್ಲಿ ಈ ಎಲ್ಲ ಸವಾಲುಗಳನ್ನು ಮೀರಿ, ಜಾಗತಿಕ ಮಟ್ಟದಲ್ಲಿ ನಾವು ಮುನ್ನಡೆಯಬೇಕಿದೆ
ಡಾ.ಎಂ.ಬಿ.ಪಾಟೀಲ್,ಕುಲಪತಿ
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.