ವಿಜಯಪುರ: ಕಣ್ವ ಮಠಾಧೀಶ ವಿದ್ಯಾಕಣ್ವ ವಿರಾಜ ತೀರ್ಥರು ತಮ್ಮ ಈ ಬಾರಿಯ ಚಾರ್ತುಮಾಸ್ಯ ಸಂಕಲ್ಪವನ್ನು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಮೂಲ ಮಹಾಸಂಸ್ಥಾನ ಹುಣಸಿಹೊಳೆ ಗ್ರಾಮದಲ್ಲಿ ಕೈಗೊಳ್ಳಲಿದ್ದಾರೆ.
ಜುಲೈ 12ರಿಂದ ಸಪ್ಟೆಂಬರ್ 29ರವರೆಗೆ ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ದಂಡೋದಕ ಸ್ನಾನದೊಂದಿಗೆ ಚಾತುರ್ಮಾಸ್ಯ ಆರಂಭಿಸಲಿರುವ ಶ್ರೀಗಳು ಪ್ರತಿನಿತ್ಯ ವಿಠಲ ಕೃಷ್ಣನ ಸಂಸ್ಥಾನ ಪೂಜೆ, ಭಕ್ತರಿಗೆ ತಪ್ತ ಮುದ್ರಾಧಾರಣೆ ಪಾದ ಪೂಜೆ ನೆರವೇರಿಸಲಿರುವರು.
ನಿತ್ಯ ವಿವಿಧ ಪಂಡಿತರಿಂದ ಉಪನ್ಯಾಸ, ಅಧಿಕ ಮಾಸದಲ್ಲಿ ವಿಶೇಷ ಪೂಜೆ ಹೋಮ ಹವನಗಳು ನಡೆಯಲಿವೆ ಎಂದು ಮಠದ ಅಭಿವೃದ್ಧಿ ಸಮಿತಿ ಸದಸ್ಯ ಭೀಮಸೇನರಾವ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.