ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿ | ಹಂದಿಗಳಿಗೆ ಕಾಲರಾ: ಎಚ್ಚರಿಕೆ ವಹಿಸಲು ಸಲಹೆ

Published 15 ಡಿಸೆಂಬರ್ 2023, 14:23 IST
Last Updated 15 ಡಿಸೆಂಬರ್ 2023, 14:23 IST
ಅಕ್ಷರ ಗಾತ್ರ

ಇಂಡಿ: ‘ಇಂಡಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಹಂದಿಗಳಲ್ಲಿ ಹಂದಿ ಕಾಲರಾ ಅಥವಾ ಹಾಗ್ ಕಾಲರಾ ಕಾಣಿಸಿಕೊಂಡಿದ್ದು, ಇದು ಮಾರಣಾಂತಿಕ ಕಾಯಿಲೆಯಾಗಿದೆ. ಇದರಿಂದ ಪಟ್ಟಣದಲ್ಲಿ ಅಲ್ಲಲ್ಲಿ ಹಂದಿಗಳು ಸಾವನ್ನಪ್ಪುತ್ತಿವೆ. ಹಂದಿ ಸಾಕಾಣಿಕೆದಾರರು ತಮ್ಮ ಹಂದಿಗಳನ್ನು ಪಟ್ಟಣದಲ್ಲಿ ಬಿಡಬಾರದು’ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಎಚ್.ಕನ್ನೂರ ತಿಳಿಸಿದ್ದಾರೆ.

‘ಹಂದಿ ಸಾಕಾಣಿಕೆದಾರರು ತಮ್ಮ ಹಂದಿಗಳನ್ನು ಒಂದೆಡೆ ಸೇರಿಸಿ ಸಾಕಾಣಿಕೆ ಮಾಡಬೇಕು. ಮತ್ತು ಹಂದಿ ಕಾಲರಾ ವೈರಸ್‌ಗೆ ಔಷಧಿಗಳಿವೆ. ಅವುಗಳನ್ನು ಸಂಗ್ರಹಿಸಿ ವೈರಸ್‌ನಿಂದ ಬಳಲುತ್ತಿರುವ ಹಂದಿಗಳಿಗೆ ನೀಡಿ ರೋಗ ನಿಯಂತ್ರಿಸಬೇಕು’ ಎಂದಿದ್ದಾರೆ.

ಇಂಡಿ ಪಟ್ಟಣದಲ್ಲಿರುವ ಸಹಾಯಕ ನಿರ್ದೇಶಕ ಪಶುಪಾಲನಾ ಇಲಾಖೆಗೆ ಭೇಟಿ ನೀಡಿ ಈ ಕೂಡಲೇ ಉಚಿತವಾಗಿ ಸಿಗುವ ಔಷಧಿಗಳನ್ನು ಪಡೆದು  ಜ್ವರ, ಕೆಂಪು ಮತ್ತು ಬರಿದಾಗುತ್ತಿರುವ ಕಣ್ಣು, ವಾಂತಿ, ಮಲಬದ್ಧತೆ, ಅತಿಸಾರ, ಕೆಮ್ಮು, ಉಸಿರಾಟದ ತೊಂದರೆ, ಚರ್ಮದಲ್ಲಿ ದದ್ದು ಬೆಳೆಯುತ್ತಿರುವುದು ಮುಂತಾದ ರೋಗ ಲಕ್ಷಣಗಳಿರುವ ಹಂದಿಗಳಿಗೆ ಹಾಕಬೇಕು’ ಎಂದು ಸಲಹೆ ನೀಡಿದ್ದಾರೆ.

ಹಂದಿ ಕಾಲರಾದಿಂದ ಜನಸಾಮಾನ್ಯರು ಭಯಪಡಬೇಕಿಲ್ಲ. ಇದು ಕೇವಲ ಹಂದಿಗಳಿಗೆ ಮಾತ್ರ ಹರಡುವ ವೈರಸ್ ಆಗಿದ್ದು, ಮನುಷ್ಯರಿಗೆ ಯಾವದೇ ಅಪಾಯವಿಲ್ಲ. ಪಟ್ಟಣದಲ್ಲಿ ಎಲ್ಲಿಯಾದರೂ ಹಂದಿಗಳು ಸತ್ತು ಬಿದ್ದಿದ್ದರೆ ಕೂಡಲೇ ಪುರಸಭೆಯ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಸತ್ತಿರುವ ಹಂದಿಗಳನ್ನು ಕೂಡಲೇ ಸಾಗಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT