ಗುರುವಾರ , ಮೇ 26, 2022
24 °C

ತಡೆಯಾಜ್ಞೆ ತೆರವು, ಭೀಮಾ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ರಾಷ್ಟ್ರೀಯ ಹಸಿರು ಪೀಠ ನ್ಯಾಯಾಲಯವು ಜಿಲ್ಲೆಯ ಭೀಮಾ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗೆ ನೀಡಿದ್ದ ತಡೆಯಾಜ್ಞೆ ತೆರವಾಗಿದ್ದು, ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ತಿಳಿಸಿದ್ದಾರೆ.

ತಡೆಯಾಜ್ಞೆ ಇದ್ದ ಕಾರಣಕ್ಕೆ ಭೀಮಾ ನದಿ ಪಾತ್ರದಲ್ಲಿ ಇದುವರೆಗೂ ಯಾವುದೇ ಮರಳಿನ ಬ್ಲಾಕ್‌ಗಳನ್ನು ಗುರುತಿಸಲು ಇದುವರೆಗೆ ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ.

ಪ್ರಸ್ತುತ  ಹಸಿರು ನ್ಯಾಯ ಪೀಠವು ಮಾರ್ಗಸೂಚಿಗಳ ಅನ್ವಯ ಮರಳು ಗಣಿಗಾರಿಕೆ ಮಾಡಲು ಅವಕಾಶ ನೀಡಿರುವುದರಿಂದ ಸರ್ಕಾರದ ಹೊಸ ಮರಳು ನೀತಿ-2020ರಂತೆ ಮರಳು ಗಣಿಗಾರಿಕೆ ನಡೆಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಚಡಚಣ ತಾಲ್ಲೂಕಿನ ಉಮರಾಣಿ, ಇಂಡಿ ತಾಲ್ಲೂಕಿನ ಗುಬ್ಬೇವಾಡ ಮತ್ತು ಶಿರಗೂರ, ಪಡನೂರ ಮತ್ತು ಬರಗುಡಿ, ಆಲಮೇಲ ತಾಲ್ಲೂಕಿನ  ದೇವಣಗಾಂವ, ಬಗಲೂರ ಸೇರಿದಂತೆ ಒಟ್ಟು ಐದು ಮರಳಿನ ಬ್ಲಾಕ್‌ ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. 

ಹೂಳಿನೊಂದಿಗಿರುವ ಮರಳು ತೆಗೆಯಲು ಹಟ್ಟಿ ಗೋಲ್ಡ್ ಮೈನ್ಸ್‌ಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿದ್ದು, ಸದ್ಯದಲ್ಲಿಯೇ ಜಿಲ್ಲೆಯ ಮರಳಿನ ಕೊರತೆಯು ನಿವಾರಣೆಯಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು