ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಪಾಲಿಕೆ ಉದ್ಯಾನಕ್ಕೆ ‘ಆಯುಷ್‌’ ಸ್ಪರ್ಶ

ವೈದ್ಯ ಡಾ.ನಿತಿನ್‌ ಅಗರವಾಲ್‌ ಸ್ವಂತ ಖರ್ಚಿನಲ್ಲಿ ಅಭಿವೃದ್ಧಿ
Last Updated 27 ಜುಲೈ 2021, 19:30 IST
ಅಕ್ಷರ ಗಾತ್ರ

ವಿಜಯಪುರ: ಇಲ್ಲಿನ ಮನಗೂಳಿ ರಸ್ತೆಯಲ್ಲಿರುವ ಮಹಾನಗರ ಪಾಲಿಕೆಯ ಪಾಳು ಬಿದ್ದಿದ್ದ ಉದ್ಯಾನಕ್ಕೆ ‘ಆಯುಷ್‌’ ಆಸ್ಪತ್ರೆಯ ವೈದ್ಯ ಡಾ.ನಿತಿನ್‌ ಅಗರವಾಲ್‌ ಅವರು ₹ 5 ಲಕ್ಷ ಸ್ವಂತ ಖರ್ಚು ಮಾಡಿ ಅಭಿವೃದ್ಧಿ ಪಡಿಸುವ ಮೂಲಕ ಮಾದರಿಯಾಗಿದ್ದಾರೆ.

ಹೌದು,ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಎದುರು ಸುಮಾರು 10 ಸಾವಿರ ಚದರ ಅಡಿ ವ್ಯಾಪ್ತಿ ಹೊಂದಿರುವ ಉದ್ಯಾನಕ್ಕೆ ನಿತ್ಯ ಬೆಳಿಗ್ಗೆ, ಸಂಜೆ ನೂರಾರು ವಾಯು ವಿಹಾರಿಗಳು ಬರುತ್ತಾರೆ. ಅಲ್ಲದೇ, ಕಚೇರಿ ಕೆಲಸದ ನಿಮಿತ್ತ ಬಿಡಿಎ, ಹೆಸ್ಕಾಂ ಮತ್ತು ಜಿಲ್ಲಾ ಪಂಚಾಯ್ತಿಗೆ ಬರುವ ಸಾರ್ವಜನಿಕರು ಹಾಗೂ ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರು ಈ ಉದ್ಯಾನದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಆದರೆ, ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ಉದ್ಯಾನದಲ್ಲಿ ಕೂರಲು ಕೂಡ ವ್ಯವಸ್ಥೆ ಇರಲಿಲ್ಲ. ಇದನ್ನು ಮನಗಂಡ ವೈದ್ಯ ನಿತಿನ್‌ ಅಗರವಾಲ್‌ ಅವರು ತಮ್ಮ ಸ್ವಂತ ಖರ್ಚಿನಿಂದ ಅಭಿವೃದ್ಧಿ ಪಡಿಸಿ, ಸಾರ್ವಜನಿಕ ಬಳಕೆಗೆ ಮುಕ್ತ ಅವಕಾಶ ಕಲ್ಪಿಸಿದ್ದಾರೆ.

‘ಉದ್ಯಾನವನ್ನು ಆಸ್ಪತ್ರೆ ವತಿಯಿಂದ ಅಭಿವೃದ್ಧಿ ಪಡಿಸಲು ಅವಕಾಶ ನೀಡುವಂತೆ ಮಹಾನಗರ ಪಾಲಿಕೆ,ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದೆ. ಮೂರು ತಿಂಗಳಾದರೂ ಅನುಮತಿ ಸಿಗಲಿಲ್ಲ. ಕೊನೆಗೆ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಅಭಿವೃದ್ಧಿ ಪಡಿಸಲು ಮೌಖಿಕ ಅನುಮತಿ ಪಡೆದುಕೊಂಡೆ’ ಎನ್ನುತ್ತಾರೆಅಗರವಾಲ್‌.

‘ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿಗುತ್ತಿಗೆದಾರರೊಬ್ಬರ ಮೂಲಕ ಇಡೀ ಉದ್ಯಾನಕ್ಕೆ ಆಕರ್ಷಕ ಟೈಲ್ಸ್‌ ಅಳವಡಿಸಿ, ಕೂರಲು ಬೆಂಚ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೇ, ಉದ್ಯಾನದಲ್ಲಿ ಎಂಟು ವರ್ಷಗಳ ಹಿಂದೆ ನಾನೇ ನೆಟ್ಟಿರುವ ಬೇವಿನ ಮರಗಳು ಇದೀಗ ಮರವಾಗಿ ಬೆಳೆದು ನೆರಳಾಗಿ ನಿಂತಿವೆ. ಸಾರ್ವಜನಿಕರು, ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರು ಈ ಉದ್ಯಾನದಲ್ಲಿ ಹಾಯಾಗಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾರೆ’ ಎನ್ನುತ್ತಾರೆ ಅವರು.

ಉದ್ಯಾನದಲ್ಲಿ ಸಾರ್ವಜನಿಕರು ತ್ಯಾಜ್ಯ ಹಾಕಲು ಅನುಕೂಲವಾಗುವಂತೆಡಸ್ಟ್‌ಬಿನ್‌ ಇಡಲಾಗಿದೆ. ಪ್ರತಿದಿನ ಉದ್ಯಾನ ಸ್ವಚ್ಛತೆಗಾಗಿ ಆಸ್ಪತ್ರೆ ವತಿಯಿಂದಲೇ ಕಾರ್ಮಿಕರೊಬ್ಬರನ್ನು ನಿಯೋಜಿಸಿ, ಅವರಿಗೆ ಕೂಲಿಯನ್ನು ಆಸ್ಪತ್ರೆ ವತಿಯಿಂದ ನೀಡುತ್ತಿರುವೆ ಎಂದು ಹೇಳಿದರು.

ಮಹಾನಗರ ಪಾಲಿಕೆ, ಬಿಡಿಎಗೆ ಸೇರಿದ ಖಾಲಿ ಜಾಗ, ಉದ್ಯಾನವನ್ನು ಹೊಂಚುಹಾಕಿ ಅತಿಕ್ರಮಣ ಮಾಡುವವರ ನಡುವೆ ಖಾಸಗಿ ಆಸ್ಪತ್ರೆ ವೈದ್ಯ ಅಗರವಾಲ್‌ ಅವರು ತಮ್ಮ ಸ್ವತಃ ಖರ್ಚಿನಿಂದ ಉದ್ಯಾನವನ್ನು ಅಭಿವೃದ್ಧಿ ಪಡಿಸಿ, ನಿರ್ವಹಣೆ ಮಾಡುವ ಮೂಲಕ ಇತರೆಯವರಿಗೆ ಮಾದರಿಯಾಗಿದ್ದಾರೆ.

***

ಮಹಾನಗರ ಪಾಲಿಕೆಗೆ ಸೇರಿದ ಉದ್ಯಾನ ಸಾರ್ವಜನಿಕರಿಗೆ ಉಪಯೋಗವಾಗಲಿ ಎಂಬ ಕಾರಣಕ್ಕೆ ಅಭಿವೃದ್ಧಿ ಪಡಿಸಿದ್ದೇನೆ. ಶೀಘ್ರದಲ್ಲೇಶುದ್ಧಕುಡಿಯುವ ನೀರು, ರಾತ್ರಿ ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗುವುದು.
–ಡಾ.ನಿತಿನ್‌ ಅಗರವಾಲ್‌, ವೈದ್ಯ, ಆಯುಷ್‌ ಆಸ್ಪತ್ರೆ, ವಿಜಯಪುರ

***
ಜಿಲ್ಲೆಯ ವಿವಿಧೆಡೆಯಿಂದ ಕೆಲಸದ ನಿಮಿತ್ತ ಬರುವ ಸಾರ್ವಜನಿಕರು, ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರು ಇಲ್ಲಿ ವಿಶ್ರಾಂತಿ ಪಡೆಯಲು ಬಹಳ ಅನುಕೂಲವಾಗಿದೆ.
–ಡಾ.ರಶ್ಮಿ ಬಿರಾದಾರ, ವೈದ್ಯ, ಆಯುಷ್‌ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT