ಬುಧವಾರ, ಡಿಸೆಂಬರ್ 8, 2021
21 °C

ದ್ರಾಕ್ಷಿ ಬೆಳೆ ಹಾನಿ: ಪರಿಹಾರಕ್ಕೆ ಆಗ್ರಹ

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವರಹಿಪ್ಪರಗಿ: ತಾಲ್ಲೂಕಿನಾದ್ಯಂತ ಅಕಾಲಿಕ ಮಳೆ ಸುರಿದು ದ್ರಾಕ್ಷಿ ಬೆಳೆಗೆ ಹಾನಿಯಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ದ್ರಾಕ್ಷಿ ಬೆಳೆಗಾರರು ಆಗ್ರಹಿಸಿದ್ದಾರೆ.

ಪಟ್ಟಣದ ತಹಶೀಲ್ದಾರ್ ಕಚೇರಿಗೆ ಚಿಕ್ಕರೂಗಿ, ಗಂಗನಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ಗುರುವಾರ ಬಂದಿದ್ದ ರೈತರು ಮನವಿ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡರಾದ ಸೋಮಶೇಖರ ಹಿರೇಮಠ, ಶ್ರೀಶೈಲ ಮುಳಜಿ ಮಾತನಾಡಿ, ಕಳೆದ ಹಲವು ದಿನಗಳಿಂದ ಅಕಾಲಿಕ ಮಳೆಯಾಗುತ್ತಿದ್ದು, ವಾತಾವರಣ ಸಂಪೂರ್ಣ ಏರುಪೇರಾಗಿದೆ. ಜೊತೆಗೆ ಬೆಳಿಗ್ಗೆ ಮಂಜು ಸಹ ಬೀಳುತ್ತಿದ್ದು ಇದರಿಂದ ದೇವರಹಿಪ್ಪರಗಿ ತಾಲ್ಲೂಕಿನ ಸುಮಾರು 600 ಹೆಕ್ಟೇರ್‌ ದ್ರಾಕ್ಷಿ ಬೆಳೆ ಹಾಳಾಗಿದೆ. ಇದು ದ್ರಾಕ್ಷಿ ಬೆಳೆಗಾರರಿಗೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ತಕ್ಷಣವೇ ಸರ್ಕಾರ ಗ್ರಾಮಲೆಕ್ಕಾಧಿಕಾರಿಗಳ ಮೂಲಕ ಬೆಳೆ ಹಾನಿಯನ್ನು ಸಮೀಕ್ಷೆ ಮಾಡಿಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸಿದ್ದು ಪಾಟೀಲ (ಜಾಲವಾದ), ಎಂ.ಡಿ.ಕಣಮೇಶ್ವರ, ಭೀರಪ್ಪ ಕಣಮೇಶ್ವರ, ಭೀಮರಾಯ ಅಂಗಡಿ, ಸಿದ್ದನಗೌಡ ಬಿರಾದಾರ, ಸಂಗಮೇಶ ಜನಗೊಂಡ, ಅಪ್ಪಾಸಾಹೇಬ ಸಾಹು, ಮಲ್ಲಪ್ಪ ಅಥಣಿ ರಾಮಗೊಂಡ ಬೊಳೇಗಾಂವ, ಶ್ರೀಶೈಲ ದೊಡಮನಿ, ಮಲ್ಲಿಕಾಜರ್ುನ ಬಿರಾದಾರ, ಬಸವರಾಜ ಅಂಜುಟಗಿ, ಶಂಕರ ರಾಠೋಡ, ಅನೀಲ ರತ್ನಾಕರ, ಕಮಾಲ ಕಾಟಮನಳ್ಳಿ, ಶಂಕರ ರಾಠೋಡ, ರಾಯಗೊಂಡ ಕೊಂಡಗೂಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು