ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದಲ್ಲಿ ‘ನಾಡಹಬ್ಬ’ ದಸರಾ ಸಂಭ್ರಮ

Last Updated 26 ಅಕ್ಟೋಬರ್ 2020, 14:09 IST
ಅಕ್ಷರ ಗಾತ್ರ

ವಿಜಯಪುರ: ಅತಿವೃಷ್ಟಿ ಮತ್ತು ಕೋವಿಡ್‌ ಸಂಕಷ್ಟದ ನಡುವೆಯೂ ನಾಡಹಬ್ಬ ದಸರಾ ಅಂಗವಾಗಿ ಆಯುಧ ಪೂಜೆ, ದುರ್ಗಾದೇವಿ ಆರಾಧನೆನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು.

ಆಯುಧ ಪೂಜೆ ಅಂಗವಾಗಿ ಭಾನುವಾರ ಕೃಷಿ ಉಪಕರಣಗಳು, ಬೈಕ್‌, ಕಾರು, ಟ್ರಾಕ್ಟರ್‌, ಬಸ್‌, ಲಾರಿ ಸೇರಿದಂತೆ ವಾಹನಗಳನ್ನು ಹೂವಿಗಳಿಂದ ಅಲಂಕರಿಸಿ, ಕುಂಬಳಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಲಾಯಿತು.

ವಿಜಯದಶಮಿ ಅಂಗವಾಗಿವಿದ್ಯಾ ದೇವತೆ ಸರಸ್ವತಿ, ಶಾರದಾ ಮಾತೆ ಹಾಗೂ ದುರ್ಗಾದೇವಿಯರಿಗೆ ಸೋಮವಾರ ಪೂಜೆ ಸಲ್ಲಿಸಲಾಯಿತು.

ಮಹಾನವಮಿ ಅಂಗವಾಗಿ ನಗರದ ಪ್ರಮುಖ ದೇವಾಲಯಗಳ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ನವದುರ್ಗೆಯರಿಗೆ ವಿಶೇಷ ಪೂಜೆ ಸಲ್ಲಿಸಿ, ಪಲ್ಲಕ್ಕಿಯಲ್ಲಿ ದೇವಿ ಮೂರ್ತಿಯನ್ನು ಮೆರವಣೆಗೆ ಮಾಡಿ, ವಿಸರ್ಜಿಸಲಾಯಿತು.

ಸಂಜೆ ಬನ್ನಿ ಮುಡಿಯುವ ಮೂಲಕ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಳ್ಳಲಾಯಿತು. ‘ಬನ್ನಿಯಂತೆ ಬಾಳು ಬಂಗಾರವಾಗಲಿ’ ಎಂದು ಶುಭ ಹಾರೈಸಲಾಯಿತು.

ನಡೆಯದ ಬನ್ನಿ ವಿನಿಯಮಯ:

ಜನಪ್ರತಿನಿಧಿಗಳು ಈ ಬಾರಿ ತಮ್ಮ ಮನೆಗಳಲ್ಲಿ ದಸರಾ ಅಂಗವಾಗಿ ಸಾಂಪ್ರದಾಯಿಕ ನಡೆಸಿಕೊಂಡು ಬರುತ್ತಿದ್ದ ಬನ್ನಿ ವಿನಿಮಯ ಕಾರ್ಯಕ್ರಮವನ್ನು ಕೈಬಿಟ್ಟು, ಬೆಂಬಲಿಗರು, ಅಭಿಮಾನಿಗಳು ಮತ್ತು ಕ್ಷೇತ್ರದ ಜನರಿಗೆ ಕೇವಲ ಹಬ್ಬದ ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT