ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ 75 ವರ್ಷ ವಯೋಮಾನದ ವೃದ್ಧರೊಬ್ಬರು (ರೋಗಿ ಸಂಖ್ಯೆ 3265588) ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಜ. 16ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜ. 17 ರಂದು ಸಾವಿಗೀಡಾಗಿದ್ದಾರೆ.

ಇವರು ಕೋವಿಡ್ ಲಸಿಕೆ ಡೋಸ್ 1, ಡೋಸ್ 2 ಪಡೆದುಕೊಂಡಿದ್ದರು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮೂರು ಶಾಲೆಗೆ ರಜೆ:

ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಕಾರಣಕ್ಕೆ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಕೆ.ಜಿ.ಬಿ.ವಿ ಶಾಲೆ(20 ಮಕ್ಕಳಿಗೆ) ಹಾಗೂ ರಾಮಲಿಂಗೇಶ್ವರ ಪ್ರೌಢಶಾಲೆ(6 ಮಕ್ಕಳಿಗೆ) ಹಾಗೂ ಇಂಡಿ ಪಟ್ಟಣದ ಆರ್.ಎಂ.ಶಹಾ ಪಬ್ಲಿಕ್ ಶಾಲೆ(8)ಗೆ ರಜೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಂದು ವರ್ಷದೊಳಗಿನ ಒಂದು ಮಗುವಿಗೆ, 2ರಿಂದ 5 ವರ್ಷದೊಳಗಿನ 7, 6ರಿಂದ 10 ವರ್ಷದೊಳಗಿನ 21, 11ರಿಂದ 15 ವರ್ಷದೊಳಗಿನ 96, 16ರಿಂದ 18 ವರ್ಷದೊಳಗಿನ 58 ಮಕ್ಕಳಿಗೆ ಹಾಗೂ 19ರಿಂದ 21 ವರ್ಷದೊಳಗಿನ 65 ಮಕ್ಕಳು ಸೇರಿದಂತೆ ಒಟ್ಟು 249 ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯ ಕೋವಿಡ್ ಪಾಸಿಟಿವಿಟಿ ರೇಟ್ 5.82 ಇದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.