ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಎನ್‌ಕೌಂಟರ್‌; ಸಿಬಿಐಗೆ ಆಗ್ರಹ

ಜಾಮೀನಿನ ಮೇಲೆ ಆರೋಪಿಗಳ ಬಿಡುಗಡೆ; ಜೀವಕ್ಕೆ ಭಯವಿದೆ–ವಿಮಲಾಬಾಯಿ ಚಡಚಣ ಹೇಳಿಕೆ
Last Updated 26 ಏಪ್ರಿಲ್ 2019, 13:17 IST
ಅಕ್ಷರ ಗಾತ್ರ

ವಿಜಯಪುರ:ಭೀಮಾ ತೀರದ ರೌಡಿ ಶೀಟರ್‌ಗಳಾದ ಧರ್ಮರಾಜ ಚಡಚಣನ ನಕಲಿ ಎನ್‌ಕೌಂಟರ್‌, ಈತನ ಸಹೋದರ ಗಂಗಾಧರ ಚಡಚಣನ ನಿಗೂಢ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ, ಪ್ರಮುಖ ಆರೋಪಿಗಳಿಗೆ ಜಾಮೀನು ಸಿಕ್ಕಿರುವುದಕ್ಕೆ, ಕೊಲೆಯಾದ ಸಹೋದರರ ತಾಯಿ ವಿಮಲಾಬಾಯಿ ಚಡಚಣ ಆತಂಕ ವ್ಯಕ್ತಪಡಿಸಿದ್ದಾರೆ.

‘ನನ್ನಿಬ್ಬರು ಮಕ್ಕಳನ್ನು ಕೊಲೆಗೈದ ಮಹಾದೇವ ಭೈರಗೊಂಡ, ಪಿಎಸ್‌ಐ ಗೋಪಾಲ ಹಳ್ಳೂರಗೆ ಕಲಬುರ್ಗಿ ಹೈಕೋರ್ಟ್‌ ಜಾಮೀನು ನೀಡಿದೆ. ಇವರಿಂದ ನನಗೆ ಜೀವಭಯವಿದೆ’ ಎಂದು ವಿಮಲಾಬಾಯಿ ಚಡಚಣ ಅಜ್ಞಾತ ಸ್ಥಳದಿಂದ ವಿಡಿಯೊ ಕ್ಲಿಪ್ಪಿಂಗ್‌ ಮೂಲಕ ತಿಳಿಸಿದ್ದಾರೆ.

‘ಮಹಾದೇವನಿಗೆ ದುಡ್ಡಿನ ಬಲವಿದೆ. ರಾಜಕಾರಣಿಗಳ ಬೆಂಬಲವಿದೆ. ಇನ್ಮುಂದೆ ನಾನು ನ್ಯಾಯಾಲಯದ ಕೆಲಸಕ್ಕೂ ಹೋಗಿ ಬರೋದು ಕಷ್ಟವಿದೆ. ಯಾವ ಸಂದರ್ಭ ಬೇಕಾದರೂ ನನ್ನ ಹತ್ಯೆಗೈಯಬಹುದು’ ಎಂದು ವಿಮಲಾಬಾಯಿ ವಿಡಿಯೊದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

‘ನನಗೆ ನ್ಯಾಯ ಸಿಗದಾಗಿದೆ. ತಮ್ಮ ರೊಕ್ಕ, ಅಧಿಕಾರದ ಪ್ರಭಾವ ಬಳಸಿಕೊಂಡು ಮಹಾದೇವ ಸಾಕ್ಷಿ ನಾಶ ಪಡಿಸುತ್ತಾನೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ, ನ್ಯಾಯಾಲಯ ಸಿಬಿಐಗೆ ಒಪ್ಪಿಸಬೇಕು’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ವಿಡಿಯೊ ಕ್ಲಿಪ್ಪಿಂಗ್ 1.05 ನಿಮಿಷವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT